Wednesday, June 24, 2026
HomeUncategorizedಬೆಳ್ತಂಗಡಿ : ಯೂಟ್ಯೂಬರ್ ಸಮೀರ್.ಎಂ.ಡಿ ಬೆಂಗಳೂರು ಬಾಡಿಗೆ ಮನೆಯಲ್ಲಿ ಶೋಧ ಕಾರ್ಯಾಚರಣೆ ಅಂತ್ಯ

ಬೆಳ್ತಂಗಡಿ : ಯೂಟ್ಯೂಬರ್ ಸಮೀರ್.ಎಂ.ಡಿ ಬೆಂಗಳೂರು ಬಾಡಿಗೆ ಮನೆಯಲ್ಲಿ ಶೋಧ ಕಾರ್ಯಾಚರಣೆ ಅಂತ್ಯ

- Advertisement -
- Advertisement -

ಬೆಳ್ತಂಗಡಿ : ಎI ವಿಡಿಯೋ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್.ಎಂ.ಡಿ ಪೊಲೀಸರಿಗೆ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನಲೆಯಲ್ಲಿ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಎಫ್.ಎಸ್.ಎಲ್ ವಿಭಾಗದ ಸೋಕೊ ಸಿಬ್ಬಂದಿ ಜೊತೆಯಲ್ಲಿ ಸೆ.4 ರಂದು ಮಾದ್ಯಾಹ್ನ 1:40 ಕ್ಕೆ ಬೆಂಗಳೂರಿನ ಅನೇಕಲ್ ನಲ್ಲಿರುವ ಹುಲ್ಲಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಬೆಳ್ತಂಗಡಿ ನ್ಯಾಯಾಲಯದಿಂದ ಸೆ.3 ರಂದು ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದರು. ಮನೆಯಲ್ಲಿ ಶೋಧ ಕಾರ್ಯವನ್ನು ರಾತ್ರಿ 7:30 ಕ್ಕೆ ಅಂತ್ಯ ಮಾಡಿ ಬೆಳ್ತಂಗಡಿ ಪೊಲೀಸರು ವಾಪಸ್ ತೆರಳಿದ್ದಾರೆ.

ಸಮೀರ್ ಮನೆಯಿಂದ ವಿಡಿಯೋ ಎಡಿಟಿಂಗ್ ಮಾಡಲು ಬಳಸಿದ ಕಂಪ್ಯೂಟರ್, ಕ್ಯಾಮರಾ, ಸಿಪಿಯು, ಐಫೋನ್‌ ಮೊಬೈಲ್ ಫೋನ್, ವೈಫೈ ರೂಟರ್, ಆಧಾರ್ ದಾಖಲೆ ಹಾಗೂ ಇತರೆ ಕೆಲ ದಾಖಲೆಗಳನ್ನು ಸೋಕೋ ಸಿಬ್ಬಂದಿ ಸಮ್ಮುಖದಲ್ಲಿ ಪೊಲೀಸರು ಮಹಜರು ನಡೆಸಿ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!