Wednesday, September 16, 2026
Homeಕರಾವಳಿವಿಟ್ಲದ ಹಿರಿಯ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡ ಕೆ.ಎಸ್. ಸಂಕಪ್ಪ ಗೌಡ ನಿಧನ

ವಿಟ್ಲದ ಹಿರಿಯ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡ ಕೆ.ಎಸ್. ಸಂಕಪ್ಪ ಗೌಡ ನಿಧನ

- Advertisement -
- Advertisement -

ವಿಟ್ಲ: ಹಿರಿಯ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡ, ಕೈಂತಿಲ ನಿವಾಸಿ ಕೆ.ಎಸ್. ಸಂಕಪ್ಪ ಗೌಡ (68) ಅವರು ಅಸೌಖ್ಯದಿಂದ ಸೆ.16ರಂದು ಸ್ವಗೃಹದಲ್ಲಿ ನಿಧನರಾದರು.

ಸಂಕಪ್ಪ ಗೌಡ ಅವರು ವಿಟ್ಲ ಗ್ರಾಮ ಪಂಚಾಯಿತಿಗೆ ಸತತ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಟ್ಲ ಕ್ಷೇತ್ರದಿಂದ ಬಂಟ್ವಾಳ ಎಪಿಎಂಸಿಗೆ ಚುನಾಯಿತರಾಗಿ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!