Monday, June 8, 2026
Homeಕರಾವಳಿಪುತ್ತೂರು: ವೈಯುಕ್ತಿಕ ದ್ವೇಷ ಹಿನ್ನಲೆ ; ಸಂಬಳ ನೀಡದೆ ಸತಾಯಿಸುತ್ತಿರುವ ಹಿರಿಯ ಅಧಿಕಾರಿಗಳು!

ಪುತ್ತೂರು: ವೈಯುಕ್ತಿಕ ದ್ವೇಷ ಹಿನ್ನಲೆ ; ಸಂಬಳ ನೀಡದೆ ಸತಾಯಿಸುತ್ತಿರುವ ಹಿರಿಯ ಅಧಿಕಾರಿಗಳು!

- Advertisement -
- Advertisement -

ಪುತ್ತೂರು: ಹಿರಿಯ ಅಧಿಕಾರಿಗಳ ವೈಯುಕ್ತಿಕ ದ್ವೇಷದಿಂದಾಗಿ ಪುತ್ತೂರಿನ ಅರಣ್ಯಾಧಿಕಾರಿಯೊಬ್ಬರು ಕಳೆದ 4 ತಿಂಗಳಿನಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ

ಪುತ್ತೂರು ಉಪ ವಲಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ಸಂಬಳವಿಲ್ಲದೆ ದುಡಿಯುತ್ತಿರುವ ಅಧಿಕಾರಿಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಇವರನ್ನು ಸಕಾರಣವಿಲ್ಲದೆ ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದು, ಇದನ್ನು ಪ್ರಶ್ನಿಸಿ ಸಂಜೀವ ಪೂಜಾರಿಯವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣದ ಮೊರೆ ಹೋಗಿದ್ದರು.

ಕೋರ್ಟ್ ನಲ್ಲಿ ಉಪ ವಲಯಾಧಿಕಾರಿ ಸಂಜೀವ ಪೂಜಾರಿ ಪರವಾಗಿ ಕೋರ್ಟ್ ತೀರ್ಪು ನೀಡಿದ್ದು, ಇದೀಗ ನ್ಯಾಯಲಯ ತೀರ್ಪು ನೀಡಿದರೂ ಅಧಿಕಾರಿಗಳು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಸಂಜೀವ ಪೂಜಾರಿಯವರು ಆರೋಪಿಸಿದ್ದಾರೆ.

ಈಗಾಗಲೇ ತನಗಾದ ಅನ್ಯಾಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಇನ್ನು ಸಿಕ್ಕಿಲ್ಲ ಎಂಬುದು ವಿಷಾದನೀಯ.

- Advertisement -

Latest News

error: Content is protected !!