Saturday, June 27, 2026
Homeಕರಾವಳಿಮಂಗಳೂರು: ಅಡಿಕೆಗೆ ಬಂಪರ್ ಬೆಲೆ; 500 ರೂ. ದಾಟಿದ ಹೊಸ ಅಡಿಕೆ ಬೆಲೆ!

ಮಂಗಳೂರು: ಅಡಿಕೆಗೆ ಬಂಪರ್ ಬೆಲೆ; 500 ರೂ. ದಾಟಿದ ಹೊಸ ಅಡಿಕೆ ಬೆಲೆ!

- Advertisement -
- Advertisement -

ಮಂಗಳೂರು: ಗುರುವಾರ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ ಗೆ 505 ರೂ.ಗಳಿಗೆ ಖರೀದಿಯಾಗಿದ್ದು, ಇತಿಹಾಸದಲ್ಲೇ ದಾಖಲೆಯ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ.

ಬೆಳ್ಳಾರೆಯಲ್ಲಿ ಗುರುವಾರ 505ಕ್ಕೆ ಖರೀದಿಯಾಗಿದೆ. ಹಳೆ ಅಡಿಕೆ ಹಾಗೂ ಹೊಸ ಅಡಿಕೆ ಎರಡೂ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ . ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 480 ರೂ. ದರವಿತ್ತು. ಉತ್ತರ ಭಾರತದಲ್ಲಿ ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನಷ್ಟು ಬೆಲೆ ಏರಿಕೆಯ ನಿರೀಕ್ಷೆ ಹೊಂದಿರುವ ಬೆಳೆಗಾರರು ಉತ್ತಮ ಧಾರಣೆ ಬಂದರೂ ಹೊಸ ಅಡಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!