Saturday, June 6, 2026
Homeಕರಾವಳಿಪುತ್ತೂರಿನ ಹಿರಿಯ ನ್ಯಾಯವಾದಿ ಕೆ ಸತೀಶ್ ಪ್ರಭು ನಿಧನ

ಪುತ್ತೂರಿನ ಹಿರಿಯ ನ್ಯಾಯವಾದಿ ಕೆ ಸತೀಶ್ ಪ್ರಭು ನಿಧನ

- Advertisement -
- Advertisement -

ಪುತ್ತೂರಿನ ಹಿರಿಯ ನ್ಯಾಯವಾದಿ ಕೆ ಸತೀಶ್ ಪ್ರಭು ( 66 ವ ) ಅವರು ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇವರು ಕಳೆದ ಕೆಲ ವರ್ಷಗಳಿಂದ ಅನ್ಯಾರೋಗ್ಯದಿಂದ ಬಳಲುತ್ತಿದ್ದು , ಇತ್ತೀಚೆಗೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಬೊಳುವಾರು ಕಾಪಿಕಾಡು ದಿ ಪುಂಡಲಿಕ ಪ್ರಭು ಅವರ ಪುತ್ರರಾದ ಕೆ.ಸತೀಶ್ ಪ್ರಭು ಅವರು ಪ್ರತಿಷ್ಟಿತ ಕಂಡಿಗೆ ಕುಟುಂಬಕ್ಕೆ ಸೇರಿದವರು. ಪುತ್ತೂರಿನ ಬೊಳ್ವಾರುನಲ್ಲಿ ಕಛೇರಿ ಹೊಂದಿದ್ದ ಅವರು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ವಾದದಲ್ಲಿ ಎತ್ತಿದ್ದ ಕೈ.

ಮೃತರು ತಾಯಿ , ಪತ್ನಿ ಸುಧಾ ಎಸ್ ಪ್ರಭು , ಪುತ್ರಿ ಶಿಲ್ಪಾ ಪ್ರಭು , ಪುತ್ರ ವಿಫೇಶ್ ಪ್ರಭು ಹಾಗೂ ಮೂವರು ಸಹೋದರರು , ಸಹೋದರಿಯನ್ನು ಅಗಲಿದ್ದಾರೆ .

- Advertisement -

Latest News

error: Content is protected !!