Thursday, July 16, 2026
Homeಕರಾವಳಿಉಡುಪಿಅಜೆಕಾರು: ಮನೆಯ ಹಂಚು ತೆಗೆದು ಒಳನುಗ್ಗಿ ನಗ ನಗದು ದೋಚಿ ಕಳ್ಳರು ಪರಾರಿ !

ಅಜೆಕಾರು: ಮನೆಯ ಹಂಚು ತೆಗೆದು ಒಳನುಗ್ಗಿ ನಗ ನಗದು ದೋಚಿ ಕಳ್ಳರು ಪರಾರಿ !

- Advertisement -
- Advertisement -

ಅಜೆಕಾರು: ಕಳ್ಳರು ಶಿರ್ಲಾಲುವಿನ ಸೂರ್ಯಂತೊಕ್ಕು ಎಂಬಲ್ಲಿನ ದೀಪಿಕಾ ಅವರ ಮನೆಗೆ ನುಗ್ಗಿ 1.18 ಲಕ್ಷ ರೂ ಮೌಲ್ಯದ ನಗ ನಗದು ದೋಚಿ ಪರಾರಿಯಾಗಿದ್ದಾರೆ.

ತಮ್ಮ ಮನೆಗೆ ಬೀಗ ಹಾಕಿ ಶಿರ್ಲಾಲುವಿನ ಪಯ್ಯಂದೆಯ ತಾಯಿ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಇವರ ಮನೆಯ ಹಂಚನ್ನು ತೆಗೆದು ಒಳ ನುಗ್ಗಿದ ಕಳ್ಳರು ಕೋಣೆಯಲ್ಲಿ ಬೀರುವಿನಲ್ಲಿ ಇಟ್ಟಿದ್ದ 1,18,000 ರೂ . ಮೌಲ್ಯದ ಚಿನ್ನಾಭರಣ ಹಾಗೂ 15,000 ರೂ . ನಗದನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!