ಕಲಬುರಗಿ: ಸಾಲದ ಹೊರೆ ತಾಳಲಾರದೇ ಹಿರಿಯ ಪತ್ರಕರ್ತ ನೇಣಿಗೆ ಕೊರಳೊಡ್ಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಹಿರಿಯ ಪತ್ರಕರ್ತ ಕೆ.ಎನ್.ರೆಡ್ಡಿ (57) ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಬೇಸರದಿಂದಲೇ ಮನೆಯಿಂದ ಹೊರಹೋಗಿದ್ದ ರೆಡ್ಡಿ ಅವರು ರಾತ್ರಿಯಾದರೂ ವಾಪಸ್ ಆಗಲಿಲ್ಲ. ಕುಟುಂಬಸ್ಥರು ಆತಂಕದಿಂದ ರಾತ್ರಿ 10ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದರು.ಮನೆಯ ಸಮೀಪದಲ್ಲಿ ಬೈಕ್ ನಿಲ್ಲಿಸಿದ್ದನ್ನು ಸಂಬಂಧಿಯೊಬ್ಬರು ಗಮನಿಸಿ ಸುತ್ತಲೂ ಹುಡುಕಾಡಿದಾಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ರಾಯಚೂರಿನ ಕಲ್ಲೂರು ಗ್ರಾಮದವರಾದ ರೆಡ್ಡಿ ಅವರು, ಹಲವು ವರ್ಷಗಳಿಂದ ಕಲಬುರಗಿ ನಗರದ ದರಿಯಾಪುರದಲ್ಲಿ ಪತ್ನಿ ಹಾಗೂ ಪುತ್ರಿ ಜೊತೆ ವಾಸವಾಗಿದ್ದರು. ಸಾಲದ ಹೊರೆ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ರೆಡ್ಡಿ ಅವರು ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಹಲವು ಇಂಗ್ಲಿಷ್ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು.