- Advertisement -
- Advertisement -
ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಚಂದನವನದ ಹಿರಿಯ ನಟ ಉಮೇಶ್ ಹೆಗ್ಡೆ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ನಿನ್ನೆ ಸಂಜೆ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 7:45ರ ಸುಮಾರಿಗೆ ಅವರಿಗೆ ಹೃದಾಯಾಘಾತವಾಗಿತ್ತು.
ಉಮೇಶ್ ಹೆಗ್ಡೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಉಮೇಶ್ ಅವರು ಪಾರ್ಥೀವ ಶರೀರವನ್ನು ಅವರ ನಿವಾದಸಲ್ಲಿ ಇಡಲಾಗಿದೆ. ಅಂತಿಮ ದರ್ಶನ ಪಡೆದ ನಂತರ ಕುಟುಂಬಸ್ಥರು ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ನಿರವೇರಿಸಲಿದ್ದಾರೆ.
ಕನ್ನಡ ಚಿತ್ರರಂಗದವರು ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್ ಇನ್ನಿಲ್ಲ ಎಂಬ ವಿಚಾರ ಅನೇಕರಿಗೆ ಶಾಕ್ ನೀಡಿದೆ. ನೂರಾರು ಧಾರಾವಾಹಿಗಳು, ಹತ್ತಾರೂ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ರಂಗಭೂಮಿಯ ಕಲಾವಿದರಾಗಿದ್ದರು.
- Advertisement -