Wednesday, June 3, 2026
Homeಇತರಊಟ, ನಿದ್ದೆ ಇಲ್ಲದಿದ್ದರೂ ಈ ವೈದ್ಯೆಯ ಸ್ಪಿರಿಟ್ ಹೇಗಿದೆ ನೋಡಿ...

ಊಟ, ನಿದ್ದೆ ಇಲ್ಲದಿದ್ದರೂ ಈ ವೈದ್ಯೆಯ ಸ್ಪಿರಿಟ್ ಹೇಗಿದೆ ನೋಡಿ…

- Advertisement -
- Advertisement -

ಮುಂಬೈ : ಕೊರೊನಾ ಸೋಂಕು ಊಹಿಸಲಾಗದ ರೀತಿಯಲ್ಲಿ ಇಡೀ ದೇಶವನ್ನೇ  ವ್ಯಾಪಿಸುತ್ತಿದೆ.  ಮನೆಯಿಂದ ಹೊರಗಡೆ ಬರಬೇಡಿ ಮನೆಯಲ್ಲಿ ಇರಿ ಎಂದು ಎಷ್ಟೇ ಬೇಡಿಕೊಂಡರೂ ಮನೆಯಿಂದ ಹೊರಗೆ ಬರುವವರ ಸಂಖ್ಯೆ ಮಾತ್ರ ಕಮ್ಮಿಯಾಗುತ್ತಿಲ್ಲ.

ಇನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಯ ಪಾಡಂತೂ ಹೇಳ ತೀರದು. ಆ ಪಿಪಿಟಿ ಕಿಟ್ ನೊಳಗೆ ಬೇಯುತ್ತಾ ಆಹಾ ರ ನೀರು ನಿದ್ದೆ ಇಲ್ಲದೇ ಅವರು ಪಡುತ್ತಿರುವ ಕಷ್ಟ ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ. ಅದರಲ್ಲೂ ಮಹಾನಗರಗಳ ಕೋವಿಡ್ ಆಸ್ಪತ್ರಗೆಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಯ ಪಾಡು ದೇವರಿಗೆ ಪ್ರೀತಿ. ಮುಂಬೈನ ಆಸ್ಪತ್ರೆಯ ವೈದ್ಯೆಯಾಗಿರುವ ಡಾ. ರೀಚಾ ನೇಗಿ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡ್ಕೊಂಡಿದ್ದಾರೆ.  ಕೊರೊನಾ ವಾರ್ಡ್ ನಲ್ಲಿ ಕೆಲಸ ಮಾಡುತ್ತಲೇ ಅವರು ಡ್ಯಾನ್ಸ್ ಮಾಡುತ್ತಾ ರಿಲ್ಯಾಕ್ಸ್ ಆಗುತ್ತಿದ್ದಾರೆ. ಆ ಮೂಲಕ ಕೆಲಸದ ಒತ್ತಡವನ್ನು ಕಮ್ಮಿ ಮಾಡಿಕೊಳ್ಳುತ್ತಿದ್ದಾರೆ. ಇವರ ವಿಡಿಯೋ ನೋಡಿದ ನೆಟ್ಟಿಗರು ಇವರಿಗೆ ಹ್ಯಾಟ್ಸಾಫ್ ಹೇಳಿದ್ದಾರೆ. ಕೆಲಸ ಮಾಡುವ ಉತ್ಸಾಹಕ್ಕೆ ಭೇಷ್ ಅಂದಿದ್ದಾರೆ.

- Advertisement -

Latest News

error: Content is protected !!