Wednesday, June 24, 2026
Homeಕರಾವಳಿಮಂಗಳೂರುಜೈಲು ಸುಪರಿಡೆಂಟ್ ನೇತೃತ್ವದಲ್ಲಿ ಮಂಗಳೂರು ಕಾರಾಗೃಹದಲ್ಲಿ ಶೋಧ ಕಾರ್ಯಾಚರಣೆ  ; ಮೊಬೈಲ್ ಫೋನ್ ಗಳು ಪತ್ತೆ

ಜೈಲು ಸುಪರಿಡೆಂಟ್ ನೇತೃತ್ವದಲ್ಲಿ ಮಂಗಳೂರು ಕಾರಾಗೃಹದಲ್ಲಿ ಶೋಧ ಕಾರ್ಯಾಚರಣೆ  ; ಮೊಬೈಲ್ ಫೋನ್ ಗಳು ಪತ್ತೆ

- Advertisement -
- Advertisement -

ಮಂಗಳೂರು; ಜೈಲು ಸುಪರಿಡೆಂಟ್ ನೇತೃತ್ವದಲ್ಲಿ ಮಂಗಳೂರು ಕಾರಾಗೃಹದ ಎರಡು ಬ್ಯಾರಕ್ ಗಳಲ್ಲಿ ಶೋಧ ಕಾರ್ಯಾಚರಣೆ  ನಡೆಸಿದ್ದು ಈ ವೇಳೆ ಮೊಬೈಲ್ ಫೋನ್ ಗಳು ಪತ್ತೆಯಾಗಿದೆ.

ಫೆಬ್ರವರಿ 6ರಂದು ಮಧ್ಯರಾತ್ರಿ ಜೈಲು ಸುಪರಿಡೆಂಟ್ ನೇತೃತ್ವದಲ್ಲಿ ಪೊಲೀಸರು ಕಾರಾಗೃಹದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಎ ಮತ್ತು ಬಿ ಬ್ಯಾರಕ್ ನಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ, ಎ ಬ್ಯಾರಕ್ ನಲ್ಲಿ ಎರಡು ಮತ್ತು ಬಿ ಬ್ಯಾರಕ್ ನಲ್ಲಿ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಎ ಬ್ಯಾರಕ್ ನಲ್ಲಿ ಮುಸ್ಲಿಂ ಕೈದಿಗಳನ್ನು ಇರಿಸಲಾಗಿದ್ದು ಇಬ್ರಾಹಿಂ ಹರ್ಷದ್ ಮತ್ತು ಅಸ್ಗರ್ ಎಂಬಿಬ್ಬರು ಕೀ ಪ್ಯಾಡ್ ಮೊಬೈಲ್ ಫೋನ್ ಗಳನ್ನು ಹೊಂದಿದ್ದರು. ಬಿ ಬ್ಯಾರಕ್ ನಲ್ಲಿ ಹಿಂದೂ ಕೈದಿಗಳಿದ್ದು ಶೋಧ ಸಂದರ್ಭದಲ್ಲಿ ಚಂದ್ರಹಾಸ್ ಪೂಜಾರಿ ಎಂಬ ವಿಚಾರಣಾಧೀನ ಕೈದಿಯಲ್ಲಿ ಕೀ ಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌


ಕಾರಾಗೃಹ‌ಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಬಂಧೀಖಾನೆ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್, ಆಗಿಂದಾಗ್ಗೆ ಜೈಲಿನಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದರು.‌ ಮೊಬೈಲ್, ಮಾದಕ ವಸ್ತುಗಳು ಪತ್ತೆಯಾದರೆ ಅದಕ್ಕೆ ನೀವೇ ಹೊಣೆ ಎಂದು ಜೈಲು ಅಧಿಕಾರಿಗಳನ್ನು ಎಚ್ಚರಿಸಿದ್ದರು.ಹಾಗಾಗಿ ದಿಢೀರ್ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Latest News

error: Content is protected !!