ಬಂಟ್ವಾಳ : ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಿನ ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಎಸ್.ಡಿ.ಪಿ.ಐ. ಪಕ್ಷದ ವತಿಯಿಂದ ಸ್ಯಾನಿಟೈಸರ್ ಮಿಕ್ಸ್ ಸಿಂಪಡಿಸುವ ಕಾರ್ಯ ಇಂದು ನಡೆಯಿತು.
ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸಫ್ ಆಲಡ್ಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರೋನ ವೈರಸ್ ಸೋಂಕು ಪ್ರಕರಣ ದೇಶದಲ್ಲಿ ಹೆಚ್ಚಿತ್ತಿರುವುದು ಆತಂಕಕಾರಿಯಾಗಿದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸರಕಾರ ಘೋಷಿಸಿರುವ ಲಾಕ್ ಡೌನ್ ಸಹಿತ ಎಲ್ಲಾ ನಿಯಮಗಳನ್ನು ಪ್ರತೀಯೊಬ್ಬರು ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಎಲ್ಲಾ ವರ್ಗದ ಜನರಿಗೆ ಪಕ್ಷದ ವತಿಯಿಂದ ಒಂದು ಸುತ್ತಿನ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಗಿದೆ. ವೈರಸ್ ಇದೀಗ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸರ್ ಮಿಕ್ಸ್ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮದ ಇಂದಿರಾ ನಗರ, ಮಂಜಲ್ಪಾದೆ, ಶಾರದಾನಗರ, ಮುನ್ನೂರು, ಕೊಪ್ಪಳ ಸಹಿತ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸರ್ ಮಿಕ್ಸ್ ಸಿಂಪಡಿಸಲಾಯಿತು.
ಈ ಸಂದರ್ಭದಲ್ಲಿ ಇಸ್ಮಾಯೀಲ್ ಭಾವ, ಮಲಿಕ್ ಕೊಳಕೆ, ಸಲೀಂ ಆಲಂಪಾಡಿ, ಖಾದರ್ ಆಲಂಲಾಡಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಸಜಿಪ ಮೂಡ, ಸಜಿಪ ಮುನ್ನೂರು ಗ್ರಾಮದಲ್ಲಿ ಸ್ಯಾನಿಟೈಸರ್ ಮಿಕ್ಸ್ ಸಿಂಪಡಣೆ
- Advertisement -
- Advertisement -
- Advertisement -