ಬೆಳ್ತಂಗಡಿ: ಉತ್ತರ ಪ್ರದೇಶ ವಾರಣಾಸಿಯ ಗ್ಯಾನ್ ವಾಪಿ ಮಸೀದಿಯ ಪ್ರದೇಶವನ್ನು ಮುಚ್ಚಲು ವಾರಣಾಸಿ ನ್ಯಾಯಾಲಯದ ಆದೇಶವು ಸಂಪೂರ್ಣವಾಗಿ ಪಕ್ಷಪಾತವಾಗಿದೆ. ಇದು ವುಝೂ ಕೊಳದ ಕಾರಂಜಿಯೇ ಹೊರತು ಶಿವಲಿಂಗವಲ್ಲ. ಈ ಪ್ರಕರಣ ಸಂಘ ಪರಿವಾರದ ಷಡ್ಯಂತ್ರದ ಭಾಗವಾಗಿದೆ. ನ್ಯಾಯಾಲಯವು ಆದೇಶವನ್ನು ಹಿಂಪಡೆದುಕೊಳ್ಳಬೇಕು. ಗ್ಯಾನ್ ವಾಪಿ ಮಸೀದಿಯು ಮುಸ್ಲಿಂ ಧಾರ್ಮಿಕ ಸ್ಥಳ ಅದು ಯಾವಾಗಲೂ ಮಸೀದಿಯಾಗಿ ಉಳಿಯುತ್ತದೆ ಎಂದು SDPI ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಶರೀಫ್ ಕಟ್ಟೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ, ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ ವಿಧಾನಸಭಾ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹುರಿ, ಪಕ್ಷದ ಬ್ಲಾಕ್ ಸಮಿತಿ ನಾಯಕರು ಹಾಗೂ ಕಾರ್ಯಕರ್ತರು ಮತ್ತಿತರು ಉಪಸ್ಥಿತರಿದ್ದರು.