Sunday, June 28, 2026
Homeಕರಾವಳಿಮಂಗಳೂರು; ಪತ್ನಿ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಬಂದ ಎನ್ಐಎಯಿಂದ ಬಂಧಿತರಾಗಿರುವ ಎಸ್ ಡಿಪಿಐ ಮುಖಂಡ...

ಮಂಗಳೂರು; ಪತ್ನಿ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಬಂದ ಎನ್ಐಎಯಿಂದ ಬಂಧಿತರಾಗಿರುವ ಎಸ್ ಡಿಪಿಐ ಮುಖಂಡ ಮೊಯ್ದಿನ್; ಕಣ್ಣೀರು ತರಿಸುವಂತಿತ್ತು ಪುಣಾಣಿ ಮಕ್ಕಳು ಹಾಗೂ ತಂದೆಯ ನಡುವಿನ ಬಾಂಧವ್ಯ

- Advertisement -
- Advertisement -

ಮಂಗಳೂರು; ಇತ್ತೀಚೆಗೆ ಎನ್ಐಎ ಯಿಂದ ಬಂಧಿತರಾಗಿರುವ ಎಸ್ ಡಿಪಿಐ ಮುಖಂಡ ಮೊಯ್ದಿನ್ ಅವರ ಪತ್ನಿ ನಿಧನರಾಗಿದ್ದಾರೆ.  ಈ ಹಿನ್ನಲೆ ಪತ್ನಿ ಅಂತಿಮ ದರ್ಶನಕ್ಕೆ ಪೊಲೀಸರು ಮೊಯ್ದಿನ್ ಅವರನ್ನು ಪೆರೋಲ್ ನಲ್ಲಿ ಕರೆತಂದಿದ್ದಾರೆ.


ಹಳೆಯಂಗಡಿ ಸಮೀಪದ ಇಂದಿರಾ ನಗರ ನಿವಾಸಿ ಮೊಯ್ದಿನ್‌ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಎಸ್‌ ಡಿಪಿಐ ಮುಖಂಡರಾಗಿದ್ದು, ಇತ್ತೀಚೆಗೆ ಎನ್ಐಎ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಈ ನಡುವೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರ ಪತ್ನಿ  ಡಿಸೆಂಬರ್‌ 6 ರಂದು ನಿಧನ ಹೊಂದಿದ್ದು, ಅವರ ಅಂತ್ಯ ಕ್ರಿಯೆಗೆ ಡಿಸೆಂಬರ್‌ 7 ರಂದು ಮಧ್ಯಾಹ್ನ ಮೊಯ್ದಿನ್ ರನ್ನು ಪೊಲೀಸ್ ರಕ್ಷಣೆಯಲ್ಲಿ ಪೆರೋಲ್ ಮೇಲೆ ಹಳೆಯಂಗಡಿಗೆ ಕರೆ ತಂದು ಪತ್ನಿಯ ಅಂತಿಮ ದರ್ಶನ ಮಾಡಿಸಿ ರಾತ್ರಿ ಸುಮಾರು ಏಳು ಗಂಟೆ ವೇಳೆಗೆ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಮೊಯ್ದಿನ್‌ಗೆ ಒಂದು ವರ್ಷದ ಗಂಡು ಮಗು ಸೇರಿದಂತೆ ನಾಲ್ಕು ಪುಟ್ಟ ಮಕ್ಕಳಿದ್ದಾರೆ.


ನಿನ್ನೆ ತಮ್ಮ ತಂದೆ ಪೊಲೀಸ್ ಬೆಂಗಾವಲಿನಲ್ಲಿ ಮನೆಗೆ ಬಂದಾಗ ಮಕ್ಕಳ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆ ಬಂದರೆಂದು ಅಪ್ಪನನ್ನು ಅಪ್ಪಿಕೊಂಡು ಸಂತಸದಲ್ಲಿ ತೇಲಾಡಿದ್ದರು. ಮೊಯ್ದಿನ್‌ ತನ್ನ ಮಕ್ಕಳ ಜತೆ ಮಾತನಾಡಿ ಅವರನ್ನು ಮುದ್ದಿಸಿ ಸಂತೈಸಿದ್ದರು. ಕೊನೆಗೆ ಪೊಲೀಸರು ಮೊಯ್ದಿನ್ ಅವರನ್ನು ವಾಪಾಸ್ ಕರೆದೊಯ್ದಿದ್ದು, ಸಣ್ಣ ಮಕ್ಕಳನ್ನು ಸಂಬಂಧಿಕರ ಹತ್ತಿರ ಬಿಟ್ಟು ಮೊಯ್ದಿನ್‌ ಪೊಲೀಸರ ಜತೆ ಹೆಜ್ಜೆ ಹಾಕಿದ ದೃಶ್ಯ ಮನ ಕಲಕುವಂತಿತ್ತು.

- Advertisement -

Latest News

error: Content is protected !!