Friday, January 27, 2023
Homeಕರಾವಳಿಮಂಗಳೂರು: ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಾತ ಅಂದರ್

ಮಂಗಳೂರು: ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಾತ ಅಂದರ್

- Advertisement -
- Advertisement -

ಮಂಗಳೂರು: ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಅಡ್ಯಾರ್ ಪದವು ನಿವಾಸಿ ಮುನೀರ್ (27)ಬಂಧಿತ ಆರೋಪಿ.

ಮುನೀರ್ ಮತ್ತು ಉಳ್ಳಾಲ ಬೈಲ್ ನಿವಾಸಿ ಸಂತ್ರಸ್ತ ವಿವಾಹಿತ ಮಹಿಳೆ ತೊಕ್ಕೊಟ್ಟಿನ ಬಟ್ಟೆ ಮಳಿಗೆಯಲ್ಲಿ ಸಹದ್ಯೋಗಿಗಳಾಗಿದ್ದಾರೆ.ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದರು. ಬುಧವಾರ ರಾತ್ರಿ ಮುನೀರ್ ಅಬ್ಬಂಜರದ ನಿರ್ಜನ ಪ್ರದೇಶದಲ್ಲಿ ಮಹಿಳೆಯನ್ನು ಭೇಟಿಯಾಗಿದ್ದ. ಈ ವೇಳೆ ಹಣ ಹಿಂದಿರುಗಿಸುವ ಸೋಗಿನಲ್ಲಿ ಮುನೀರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಸ್ಥಳೀಯ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿ ಮುನೀರ್ ಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!