Wednesday, June 3, 2026
Homeಕರಾವಳಿಉಡುಪಿಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಟೆಂಪೋ; ಸವಾರ ಸ್ಥಳದಲ್ಲೇ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಟೆಂಪೋ; ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಉಡುಪಿ: ಸ್ಕೂಟರ್ ಗೆ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಾಪು ತಾಲೂಕಿನಲ್ಲಿ ನಡೆದಿದೆ.

ಕಾಪು ತಾಲೂಕಿನ ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸಹ ಸವಾರೆಯಾಗಿದ್ದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತ ಸ್ಕೂಟರ್ ಸವಾರ ಪಡುಬಿದ್ರೆ ಕನ್ನಂಗಾರು ನಿವಾಸಿ ಮುಫ್ರೀನ್(18) ಎಂದು ಗುರುತಿಸಲಾಗಿದ್ದು, ಸಹ ಸವಾರೆ ತಾಯಿ ಹಾಜಿರಾ ಎಂಬವರಿಗೆ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಟೆಂಪೋ ಢಿಕ್ಕಿ ಹೊಡೆದಿದ್ದು,
ಕಾಪು ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!