Friday, June 5, 2026
Homeಕರಾವಳಿದಕ್ಷಿಣ ಕನ್ನಡದಲ್ಲಿ ಶಾಲಾರಂಭ ಸದ್ಯಕ್ಕಿಲ್ಲ!

ದಕ್ಷಿಣ ಕನ್ನಡದಲ್ಲಿ ಶಾಲಾರಂಭ ಸದ್ಯಕ್ಕಿಲ್ಲ!

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಆರಂಭವಾಗಿದ್ದರೂ 6 ರಿಂದ 8 ನೇ ತರಗತಿ ಆರಂಭದ ಬಗ್ಗೆ ಜಿಲ್ಲಾಡಳಿತ ಇನ್ನು ಅಂತಿಮ ತೀರ್ಮಾನ ಮಾಡಿಲ್ಲ . ಹೀಗಾಗಿ ಸೆ.6 ರಿಂದ 8ನೇ ತರಗತಿವರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ದ. ಕ ಜಿಲ್ಲೆಯಲ್ಲಿ ಶಾಲಾರಂಭ ಸದ್ಯಕ್ಕಿಲ್ಲ.

9 ಮತ್ತು 10ನೇ ತರಗತಿ ಕೂಡ ಸದ್ಯ ಆರಂಭವಾಗುತ್ತಿಲ್ಲ.ದ್ವಿತಿಯ ಪಿಯುಸಿ ಭೌತಿಕ ತರಗತಿ ಆರಂಭವಾಗಿದ್ದರೂ ಉಳಿದ ತರಗತಿ ಆರಂಭದ ಬಗ್ಗೆ ದ.ಕ. ಜಿಲ್ಲಾಡಳಿತ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಆದ ಬಳಿಕ ಜಿಲ್ಲಾಡಳಿತ ಶೀಘ್ರವೇ ಸಭೆ ನಡೆಸಿ ಶಾಲಾರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನು ಉಡುಪಿಯಲ್ಲಿ ತರಗತಿಗಳನ್ನು ಸ್ಯಾನಿಟೈಸ್ ಮಾಡಿ ಇಂದಿನಿಂದ ತರಗತಿ ಆರಂಭ ಮಾಡಲು ತರಗತಿಗಳನ್ನೂ ಸಿದ್ದಪಡಿಸಲಾಗಿದೆ.

- Advertisement -

Latest News

error: Content is protected !!