Friday, May 3, 2024
Homeಇತರಐದು ರೂಪಾಯಿ ನಾಣ್ಯ ನುಂಗಿ ಬಾಲಕಿ ಸಾವು!

ಐದು ರೂಪಾಯಿ ನಾಣ್ಯ ನುಂಗಿ ಬಾಲಕಿ ಸಾವು!

spot_img
- Advertisement -
- Advertisement -

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ಐದು ರೂ. ನಾಣ್ಯ ನುಂಗಿದ್ದ 4 ವರ್ಷದ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ಮಗುವನ್ನು ಖುಷಿ (4) ಎಂದು ಗುರುತಿಸಲಾಗಿದೆ. ಹಿರಿಕ್ಯಾತನಹಳ್ಳಿಯ ಅಜ್ಜಿಯ ಮನೆಯಲ್ಲಿ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಆಕೆ ನಾಣ್ಯವನ್ನು ನುಂಗಿದ್ದಳು. ಈ ಬಗ್ಗೆ ತಿಳಿದ ಪೋಷಕರು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಭಾನುವಾರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!