Friday, May 3, 2024
Homeಕರಾವಳಿಕಡಬ; ನಮ್ಮ ಶಾಲೆ ಬಳಿ ಅಂಗಡಿಯಲ್ಲಿ ತಂಬಾಕು ಮಾರುತ್ತಾರೆ ಎಂದು ಸಿಎಂ ಕಚೇರಿಗೆ ಪತ್ರ ಬರೆದ...

ಕಡಬ; ನಮ್ಮ ಶಾಲೆ ಬಳಿ ಅಂಗಡಿಯಲ್ಲಿ ತಂಬಾಕು ಮಾರುತ್ತಾರೆ ಎಂದು ಸಿಎಂ ಕಚೇರಿಗೆ ಪತ್ರ ಬರೆದ ಬಾಲಕಿ; ಸಿಎಂ ಆಫೀಸ್ ನಿಂದ ಬಂದ ಸೂಚನೆಯಂತೆ ಅಂಗಡಿ ಮೇಲೆ ಪೊಲೀಸರ ದಾಳಿ

spot_img
- Advertisement -
- Advertisement -

ಕಡಬ; ನಮ್ಮ ಶಾಲೆ ಬಳಿ ಅಂಗಡಿಯಲ್ಲಿ ತಂಬಾಕು ಮಾರುತ್ತಾರೆ ಎಂದು ಸಿಎಂ ಕಚೇರಿಗೆ ಬಾಲಕಿಯೊಬ್ಬಳು ಪತ್ರ ಬರೆದ ಪರಿಣಾಮ ಸಿಎಂ ಆಫೀಸ್ ನಿಂದ ಬಂದ ಸೂಚನೆಯಂತೆ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಕಡಬ ತಾಲೂಕಿನ ಪಿಲಿಕಜೆಯಲ್ಲಿ ನಡೆದಿದೆ.

ಶಾಲೆ ಬಳಿಯಿರುವ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಮತ್ತು ಅದರ ಪೊಟ್ಟಣ ಶಾಲೆ ಆವರಣದಲ್ಲಿ ಬಿದ್ದಿರುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕೈಕಂಬ ಪಿಲಿಕಜೆ ನಿವಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 3ನೇ ತರಗತಿ ವಿದ್ಯಾರ್ಥಿನಿ ಅಯೊರ ಪತ್ರಿಕೆಯೊಂದಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದ್ದಳು.ನಿಯಮವಿದ್ದರೂ ನಿಷೇಧ ಮಾಡದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಸೆ.15ಕ್ಕೆ ಪತ್ರ ಸಿದ್ಧಪಡಿಸಿದ್ದಳು.

ಪತ್ರಿಕೆಯ ಸಂಪಾದಕೀಯ ಮಂಡಳಿ ಆ ಪತ್ರವನ್ನು ಸಿಎಂ ಸಚಿವಾಲಯದ ಕುಂದುಕೊರತೆ ವಿಭಾಗದ ವಿಶೇಷಾಧಿಕಾರಿ ಡಾ.ವೈಷ್ಣವಿ ಅವರಿಗೆ ರವಾನಿಸಿದ್ದರು.ಸಿಎಂ ಕಚೇರಿಯಿಂದ ಬಾಲಕಿ ಮನೆಗೆ ಕರೆ ಬಂದಿದ್ದು, ಪತ್ರದ ಬಗ್ಗೆ ವಿಚಾರಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಸಿಎಂ ಕಚೇರಿಯಿಂದ ಮಾಹಿತಿ ಪೊಲೀಸ್ ಇಲಾಖೆಗೆ ರವಾನೆಯಾಗಿದೆ.

ಕಡಬ ಎಸ್​ಐ ಅಭಿನಂದನ್ ನೇತೃತ್ವದಲ್ಲಿ ಪೊಲೀಸರು ರಾತ್ರಿ 7.30ಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.ಈ ಸಂದರ್ಭ ಶಾಲೆಯಿಂದ 20 ಮೀಟರ್ ದೂರದಲ್ಲಿ ನವೀನ್ ಎಂಬುವರಿಗೆ ಸೇರಿದ ಧನಶ್ರೀ ಫ್ಯಾನ್ಸಿ ಮತ್ತು ಫೂಟ್​ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದು ತಂಬಾಕು ನಿಷೇಧ ಕಾಯ್ದೆಯಡಿ ದಂಡ ವಿಧಿಸಿ ಎಚ್ಚರಿಕೆ ನೀಡಿ ದಾಳಿಯ ಮಾಹಿತಿಯನ್ನು ಸಿಎಂ ಕಚೇರಿಗೆ ರವಾನಿಸಿದ್ದಾರೆ.

- Advertisement -
spot_img

Latest News

error: Content is protected !!