Wednesday, June 24, 2026
Homeಕರಾವಳಿಉಡುಪಿಕಿನ್ನಿಗೋಳಿ: ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ- ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರು

ಕಿನ್ನಿಗೋಳಿ: ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ- ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರು

- Advertisement -
- Advertisement -

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಪೊಂಪೈ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಶುರುವಾಗಿದೆ. ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಗಳು ಸ್ಕಾರ್ಫ್ ಹಾಕಿ ತರಗತಿ ಹಾಜರಾದ ಕಾರಣ, ಹಿಂದೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿಗೆ ಹಾಜರಾಗಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ತೆಗೆಯುವ ತನಕ ನಾವು ಕೇಸರಿ ಶಾಲು ತೆಗೆಯುದಿಲ್ಲ ಹಾಗು ನಮಗೆ ಹಿಂದು ಸಂಘಟನೆಗಳಾದ ಬಜರಂಗದಳ ವಿಶ್ವಹಿಂದೂ ಪರಿಷತ್ ಎಬಿವಿಪಿ ಬೆಂಬಲ ಸೂಚಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ವಿದ್ಯಾರ್ಥಿಗಳ ಸ್ಕಾರ್ಫ್ ವಿಚಾರ ಕುರಿತು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಈ ಕುರಿತು ಸಭೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ತಿಳಿಸಲಿದೆ.

- Advertisement -

Latest News

error: Content is protected !!