
ಬೆಳ್ತಂಗಡಿ: ಸವಣಾಲು ಮಂಜದಬೆಟ್ಟು ಪಿಲ್ಚಂಡಿ ಗುಡ್ಡೆಯ ಶ್ರೀ ಪಿಲಿಚಾಮುಂಡಿ ಕೊಡಮಣಿತ್ತಾಯ ದೈವಗಳ ಶಿಲಾಮಯ ನೂತನ ದೈವಸ್ಥಾನದಲ್ಲಿ 2026ರ ಆಗಸ್ಟ್ 04ರಂದು ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆಯು ಶಾಸ್ತ್ರೋಕ್ತವಾಗಿ ನಡೆಯಲಿವೆ.
ಕಳೆದ ಮಾರ್ಚ್ 5 ಮತ್ತು 6 ರಂದು ಧರ್ಮ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವವು ನೆರವೇರಿದ್ದು, ಆ ಸಂದರ್ಭದಲ್ಲಿ ದೈವ ನೀಡಿದ ಅಭಯ ನುಡಿಯಂತೆ, ದೈವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆಯನ್ನು ನೆರವೇರಿಸಬೇಕೆಂದು ಅಪ್ಪಣೆಯಾಗಿತ್ತು.
ದೈವದ ನುಡಿಯಂತೆ ಈ ಪ್ರಾಯಶ್ಚಿತ್ತ ಸೇವೆಗಳು 2026ರ ಆಗಸ್ಟ್ 04ರಂದು ಶ್ರೀ ಪಿಲಿಚಾಮುಂಡಿ ದೈವಸ್ಥಾನದಲ್ಲಿ ನಡ್ವಂತ್ತಾಡಿ ಬ್ರಹ್ಮಶ್ರೀ ತಂತ್ರಿಗಳಾದ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಹಾಗೂ ಶ್ರೀ ವಿಷ್ಣುಮೂರ್ತಿ ಮಂಜಿತ್ತಾಯರವರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಜಾತ್ರಾ ಆಡಳಿತ ಸಮಿತಿ, ಮಂಜದಬೆಟ್ಟು ಸವಣಾಲು ಹಾಗೂ ಗುತ್ತು ಬರ್ಕೆಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


