Friday, June 5, 2026
Homeಕರಾವಳಿಮಂಗಳೂರು: ನನ್ನ ಕೊಲೆಯಾದರೆ ಅದಕ್ಕೆ ನಳೀನ್ ಕುಮಾರ್ ಕಟೀಲ್ ನೇರ ಕಾರಣ ; ಹಿಂಜಾವೇ ಮುಖಂಡ...

ಮಂಗಳೂರು: ನನ್ನ ಕೊಲೆಯಾದರೆ ಅದಕ್ಕೆ ನಳೀನ್ ಕುಮಾರ್ ಕಟೀಲ್ ನೇರ ಕಾರಣ ; ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿಕೆ

- Advertisement -
- Advertisement -

ಮಂಗಳೂರು,: ನನ್ನ ಕೊಲೆಯಾದರೆ ಅದಕ್ಕೆನಳೀನ್ ಕುಮಾರ್ ಕಟೀಲ್ ಕಾರಣ ಎಂದು ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್  ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ನನಗೆ ನೀಡಿರುವ ಅಂಗರಕ್ಷಕರ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡ ಇದೆ. ಅಲ್ಲದೇ ನನ್ನ ಬಾಯಿ ಮುಚ್ಚಿಸುವ ಸಲುವಾಗಿ ಸತತ ಎರಡು ಮೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ ಎಂದು ದ.ಕ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಗೃಹ ಮಂತ್ರಿಯವರಲ್ಲಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿಯೂ ಮಾತನಾಡಿದ್ದೇನೆ. ನನ್ನ ಹತ್ಯೆ ನಡೆದರೆ ಬಿಜೆಪಿ ರಾಜಾಧ್ಯಕ್ಷ ಹಾಗೂ ಅವರ ತಂಡ ನೇರ ಹೊಣೆ ಎಂದು ಸತ್ಯಜೀತ್ ಸುರತ್ಕಲ್ ಆರೋಪಿಸಿದ್ದಾರೆ.

ಸರಕಾರ ಕಳೆದ 16 ವರ್ಷಗಳಿಂದ ಪೊಲೀಸ್ ಗನ್ ಮ್ಯಾನ್ ಮೂಲಕ ಭದ್ರತೆಯನ್ನು ಕಲ್ಪಸಿತ್ತು. ಆದರೆ ಇತ್ತಿಚೆಗೆ ಬಂದ ಪತ್ರದಲ್ಲಿ ಶುಲ್ಕ ಪಾವತಿಸಿ ಭದ್ರತಾ ಸಿಬ್ಬಂದಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ. ಇದರಲ್ಲಿ ಬಿಜೆಪಿ ಮುಖಂಡನ ಪಾತ್ರ ಇದ್ದು, ಹಣದಿಂದ ನನ್ನನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೆಲ್ಲ ನಾನು ಹೆದರಿ ಕೂರುವವವನಲ್ಲ ಎಂದು ಸತ್ಯಜಿತ್ ಆರೋಪಿಸಿದ್ದಾರೆ.

- Advertisement -

Latest News

error: Content is protected !!