ಮುಂಬೈ: ಪಶ್ಚಿಮ ವಲಯದಲ್ಲಿರುವ ತೀಯಾ ಬಾಂಧವರು ತೀಯಾ ಬಳಗ ಮುಂಬಯಿ ಮೂಲಕ ಎ. 9 ರಂದು ಶ್ರೀ ಅದಮಾರ್ ಮಠ, ಅಂಧೇರಿ ಪಶ್ಚಿಮ ಇಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಯನ್ನು ಹಮ್ಮಿಕೊಂಡಿದ್ದರು. ರಾಜೇಶ್ ಭಟ್ ಅವರು ಪೂಜಾ ವಿಧಿಯನ್ನು ನೆರವೇರಿಸಿದ್ದು ಮುಂಬಯಿಯ ವಿವಿದೆಡೆಯಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಪೂಜಾ ವಿಧಿಯಲ್ಲಿ ಜೋಗೇಶ್ವರಿಯ ಶರತ್ ಕೋಟ್ಯಾನ್ ಮತ್ತು ಸರಿತಾ ದಂಪತಿ ಪಾಲ್ಗೊಂಡಿದ್ದರು.ಬಿಲ್ಲವರ ಅಸೋಷಿಯೇಶನ್ ಜೋಗೇಶ್ವರಿ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ,ತೀಯಾ ಸಮಾಜದ ಗಣ್ಯವ್ಯಕ್ತಿಗಳಾದ ಚಂದ್ರಶೇಖರ ಬೆಳ್ಚಡ, ತಿಮ್ಮಪ್ಪ ಬಂಗೇರ, ಸುಧಾಕರ್ ಉಚ್ಚಿಲ್, ಈಶ್ವರ ಎಂ. ಐಲ್, ರಮೇಶ್ ಉಳ್ಳಾಲ್, ಐಲ್ ಬಾಬು, ಪದ್ಮನಾಭ ಸುವರ್ಣ, ಬಾಬು ಕೋಟ್ಯಾನ್, ರಾಮಚಂದ್ರ ಕೋಟ್ಯಾನ್, ನ್ಯಾ. ಸದಾಶಿವ ಬಿ.ಕೆ. ಸುಂದರ ಪಾಲನ್, ಸುರೇಶ್ ಬಂಗೇರ,ಪ್ರಕಾಶ್ ಸುವರ್ಣ, ವಿಶ್ವಥ್ ಬದ್ದೂರ್, ಗಣೇಶ್ ಉಚ್ಚಿಲ್, ಕುಂನ್ಹಪ್ಪ ಬಾದೇಮಾರ್ (ಬಾಬಾ), ರಶ್ಮಿ ಗೋಪಾಲ್ ಸಾಲ್ಯಾನ್, ಲಲತಾ ಕೆಬಿ., ನಿತ್ಯೋದಯ ಉಳ್ಳಾಲ್, ಚಂದ್ರಹಾಸ್ ಕೋಟ್ಯಾನ್,ಚಂದ್ರಶೇಖರ ಸಾಲ್ಯಾನ್, ಪುರಂದರ ಸಾಲ್ಯಾನ್, ಗೋಪಿನಾಥ ಕಾಸರಗೋಡು, ಸೀತಾ ಸಾಲ್ಯಾನ್, ಚಂದ್ರಾ ವಸಂತ್, ಚಂದ್ರಾ ಸುವರ್ಣ, ದಿವ್ಯ ಆರ್ ಕೋಟ್ಯಾನ್, ವಾಸುದೇವ ಪಾಲನ್, ಅಶೋಕ ಸುವರ್ಣ, ಮೋಹನ್ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ನವ ದಂಪತಿಯನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಪದ್ಮನಾಭ ಸುವರ್ಣ ನಿರ್ವಹಿಸಿದರು. ಮಧ್ಯಾಹ್ನ ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು