Sunday, May 12, 2024
Homeಕರಾವಳಿಮಾಣಿ: ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ-ಮಲೆಕೊರತಿ ದೈವಗಳ ದೊಂಪದ ಬಲಿ ನೇಮ ಸಂಪನ್ನ

ಮಾಣಿ: ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ-ಮಲೆಕೊರತಿ ದೈವಗಳ ದೊಂಪದ ಬಲಿ ನೇಮ ಸಂಪನ್ನ

spot_img
- Advertisement -
- Advertisement -

ಮಾಣಿ: ಮಾಣಿ ಗ್ರಾಮದ ಕೊಡಾಜೆ-ಗಡಿಸ್ಥಳದಲ್ಲಿ  ಗ್ರಾಮ ದೈವಗಳಾದ ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ-ಮಲೆಕೊರತಿ ದೈವಗಳ ದೊಂಪದ ಬಲಿ ನೇಮ ವೈಭವದೊಂದಿಗೆ ಸಂಪನ್ನಗೊಂಡಿತು.

ದಿನಾಂಕ 9-2-2023ನೇ ಗುರುವಾರ ಗೊನೆಮುಹೂರ್ತ ನಡೆದು, ನಂತರ ಮೂರು ದಿವಸದ ಚೆಂಡು ಆಗಿ, ಚಪ್ಪರ ಏರುವ ಸಂಪ್ರದಾಯ ಮತ್ತು ತಾ.13-02-2023ನೇ, ಸೋಮವಾರ ಬೆಳಿಗ್ಗೆ ಗಡಿಸ್ಥಳದ ನಾಗಬನದಲ್ಲಿ ನಾಗತಂಬಿಲ ನಡೆಯಿತು.

ಸಂಜೆ ಮಾಣಿಗುತ್ತು ಚಾವಡಿಯಿಂದ ಗಡಿಸ್ಥಳಕ್ಕೆ ದೈವದ ಅಪ್ಪಣೆಯಂತೆ ಭಂಡಾರ ಬಂದು, ಅನ್ನಸಂತರ್ಪಣೆಯ ಸೇವೆ ನಡೆಯಿತು. ರಾತ್ರಿ ಗಂಟೆ 12ರಿಂದ ಶ್ರೀ ದೈವಗಳ ಕಾಲಾವಧಿ ದೊಂಪದ ಬಲಿ ನೇಮ ಸಂಪ್ರದಾಯದಂತೆ ಜರಗಿತು.

ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಗಡಿಪ್ರಧಾನರಾದ ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ನಾರಾಯಣ ಆಳ್ವ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ಸದಾಶಿವ ಶೆಟ್ಟಿ ಶಂಭುಗ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ್ ಪೂಜಾರಿ ಪಲ್ಲತ್ತಿಲ್ಲ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!