- Advertisement -
![]()
- Advertisement -
ಸುಳ್ಯ : ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾಯಾಗಿದ್ದ ಸಂತೋಷ್ ಕುಮಾರ್ ರೈ ಅವರು ವಿಧಿವಶರಾಗಿದ್ದಾರೆ.
ಸಂತೋಷ್ ಕುಮಾರ್ ರೈ ಅವರು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಬಳಿಕ ವರ್ಗಾವಣೆಗೊಂಡು ಇದೀಗ ಬಿಜಾಪುರದಲ್ಲಿ ಜಿಲ್ಲಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಜ. 2 ರಂದು ಮುಂಜಾನೆ ಹೃದಯಾಘಾತದಿಂದ ಇಹ ಲೋಕ ತ್ಯಜಿಸಿದ್ದಾರೆ.
ಮೂಲತಃ ಸವಣೂರಿನವರಾದ ಸಂತೋಷ್ ಕುಮಾರ್ ರೈ ಸುಳ್ಯದಲ್ಲಿ ಹಲವು ವರ್ಷಗಳ ಕಾಲ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಯೋಜನೆಯಲ್ಲಿ ವಿಶಿಷ್ಟ ಕಾರ್ಯಗಳನ್ನು ನಡೆಸಿ ಕ್ರಿಯಾಶೀಲರಾಗಿದ್ದರು.
- Advertisement -


