
ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಸಂದೀಪ್ ಜಿ.ಎಸ್ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಆಗಿದ್ದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರು ವರ್ಗಾವಣೆ ಬಳಿಕ ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆ ಕಳೆದ ಒಂದು ತಿಂಗಳಿನಿಂದ ಖಾಲಿಯಾಗಿತ್ತು.
ಉಳ್ಳಾಲ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಕರಾವಳಿ ಕಾವಲು ಪಡೆ ಗಂಗೊಳ್ಳಿ ವಲಯದಲ್ಲಿ ಒಂದು ವರ್ಷದಿಂದ ಇನ್ಸ್ ಪೆಕ್ಟರ್ ಆಗಿ ಕಾರ್ಯಚರಿಸುತ್ತಿದ್ದ ಸಂದೀಪ್ ಜಿ.ಎಸ್ ಅಧಿಕಾರ ಸ್ವೀಕರಿಸಿದರು.
2007ನೇ ಬ್ಯಾಚ್ ನವರಾಗಿರುವ ಇವರು ಮೈಸೂರಿನಲ್ಲಿ ತರಬೇತಿ ಪಡೆದು, ದಾರವಾಡದಲ್ಲಿ ಪ್ರೊಬೆಷನರಿ ಎಸ್.ಐ ಆಗಿ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದರು.
ಹುಬ್ಬಳ್ಳಿ ನಗರ, ಶಿವಮೊಗ್ಗ, ಭದ್ರಾವತಿ, ಹೊಸನಗರ, ಕುಮ್ಸಿ, ಹಾವೇರಿ ಹಿರೇಕರೂರು ಜಿಲ್ಲೆಗಳಲ್ಲಿ ಎಸ್.ಐ ಆಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸೇವಾ ಅವಧಿಯಲ್ಲಿ ಕಳವು ಹಾಗೂ ಅಪರಾಧ ಪ್ರಕರಣ ಬೇಧಿಸಿದ ಹಿನ್ನೆಲೆಯಲ್ಲಿ ಎಸ್.ಪಿ ಅವರಿಂದ ಪ್ರಶಂಸಾ ಪತ್ರವನ್ನು ಪಡೆದುಕೊಂಡಿದ್ದರು.


