Wednesday, June 24, 2026
Homeಕರಾವಳಿಉಡುಪಿಸ್ಯಾಂಡಲ್ ವುಡ್ ನಟಿ ಬ್ಯೂಟಿ ಕ್ವೀನ್ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ; ಉಡುಪಿ ಮೂಲದ...

ಸ್ಯಾಂಡಲ್ ವುಡ್ ನಟಿ ಬ್ಯೂಟಿ ಕ್ವೀನ್ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ; ಉಡುಪಿ ಮೂಲದ ಇಬ್ಬರ ಬಂಧನ

- Advertisement -
- Advertisement -

ಬೆಂಗಳೂರು; ಸ್ಯಾಂಡಲ್ ವುಡ್ ನಟಿ ಬ್ಯೂಟಿ ಕ್ವೀನ್ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಉಡುಪಿ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಉಡುಪಿ ಮೂಲದವರಾದ ಸುಜನ್ ಮತ್ತು ಆದರ್ಶ್ ಬಂಧಿತರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಈಗಾಗಲೇ ಮಂಜುನಾಥ, ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಸೇರಿ ಒಟ್ಟು 9 ಯುವಕರನ್ನು ಬಂಧಿಸಿದ್ದರು. ಇದೀಗ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.

ಈ ಕೇಸ್ ಬಗ್ಗೆ ರಮ್ಯಾ ಮಾತನಾಡಿದರು. ‘ಮೊದಲಿನ ರೀತಿ ಅಶ್ಲೀಲ ಸಂದೇಶಗಳು ಈಗ ಬರುತ್ತಿಲ್ಲ. ಉಳಿದಿರುವ ಇನ್ನಷ್ಟು ಜನರನ್ನು ಅರೆಸ್ಟ್ ಮಾಡಬೇಕಿದೆ. ನಾನು ದೂರು ಕೊಟ್ಟ ಬಳಿಕ ಒಂದು ಜಾಗೃತಿ ಮೂಡಿದೆ. ಎಷ್ಟೋ ಹೆಣ್ಣು ಮಕ್ಕಳು ನನಗೆ ಮೆಸೇಜ್ ಮಾಡಿದ್ದಾರೆ. ಈಗ ಅರೆಸ್ಟ್ ಆಗುತ್ತಿರುವುದರಿಂದ ಕೆಟ್ಟ ಕಮೆಂಟ್ ಮಾಡುವುದಕ್ಕೂ ಮುನ್ನ 10 ಸಾರಿ ಯೋಚನೆ ಮಾಡುತ್ತಾರೆ. ಟ್ರೋಲಿಂಗ್ ಕಡಿಮೆ ಆಗಿದೆ ಅಂತ ನನಗೆ ಹೆಣ್ಮಕ್ಕಳು ಹೇಳುತ್ತಿದ್ದಾರೆ’ ಎಂದಿದ್ದಾರೆ.

- Advertisement -

Latest News

error: Content is protected !!