Wednesday, June 3, 2026
Homeಕರಾವಳಿಮಂಗಳೂರುಸುಬ್ರಮಣ್ಯ; ದನ ಮೇಯಿಸಲು ಗುಡ್ಡೆಗೆ ಹೋಗಿದ್ದಾಗ ಕಡವೆ ದಾಳಿ; ಯುವಕನಿಗೆ ಗಂಭೀರ ಗಾಯ

ಸುಬ್ರಮಣ್ಯ; ದನ ಮೇಯಿಸಲು ಗುಡ್ಡೆಗೆ ಹೋಗಿದ್ದಾಗ ಕಡವೆ ದಾಳಿ; ಯುವಕನಿಗೆ ಗಂಭೀರ ಗಾಯ

- Advertisement -
- Advertisement -

ಸುಬ್ರಮಣ್ಯ; ದನ ಮೇಯಿಸಲು ಗುಡ್ಡೆಗೆ ಹೋಗಿದ್ದಾಗ ಕಡವೆ ದಾಳಿ ಮಾಡಿ ಯುವಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಸುಬ್ರಮಣ್ಯ ಸಮೀಪದ ಬಳ್ಪದಲ್ಲಿ ನಡೆದಿದೆ

  ಬಳ್ಪ ಗ್ರಾಮದ ಆಲ್ಕಬೆ ರಾಮಣ್ಣ ಗೌಡರ ಪುತ್ರ ಸಂಜಯ್ ಎಂಬವರು ತಮ್ಮ ಮನೆಯ ದನಗಳನ್ನು ಮೇಯಿಸಲು ಗುಡ್ಡಗೆ ಕರೆದೊಯ್ಯುವಾಗ ಏಕಾಏಕಿ ಕಡವೆ ಅವರ ಮೇಲೆ ಹಾರಿದೆ. ಪರಿಣಾಮ ಸಂಜಯ್ ಅವರ   ಕೈ ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಇತ್ತೀಚೆಗೆ  ಇಲ್ಲಿನ  ಮನೆಯೊಂದರಿಂದ  5 ನಾಯಿಗಳನ್ನು ಚಿರತೆ ಕೊಂಡೊಯ್ದಿತ್ತು. ಕಾಡುಪ್ರಾಣಿಗಳ ಕಾಟದಿಂದ ಈ ಭಾಗದ ಜನ ಬೇಸತ್ತು ಹೋಗಿದ್ದು, ಚುನಾವಣಾ ಸಂದರ್ಭದಲ್ಲಿ ಕೃಷಿಕರ ಕೋವಿಗಳನ್ನು ಡೆಪಾಸಿಟ್ ಇಟ್ಟು ಕೃಷಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಕೋವಿ ಡೆಪಾಸಿಟ್ ನಿಯಮದ ವಿರುದ್ದ    ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!