Sunday, June 7, 2026
Homeತಾಜಾ ಸುದ್ದಿಸಲ್ಮಾನ್ ಖಾನ್ ಸ್ಟೈಲ್‌ನಲ್ಲಿ ರಸ್ತೆಗಿಳಿದ ಅಭಿಮಾನಿ ಅರೆಸ್ಟ್

ಸಲ್ಮಾನ್ ಖಾನ್ ಸ್ಟೈಲ್‌ನಲ್ಲಿ ರಸ್ತೆಗಿಳಿದ ಅಭಿಮಾನಿ ಅರೆಸ್ಟ್

- Advertisement -
- Advertisement -

ಲಕ್ನೋ: ಅನೇಕರು ತಮ್ಮ ನೆಚ್ಚಿನ ನಟನನ್ನು ಅನುಕರಣೆ ಮಾಡುತ್ತಾರೆ. ಹಾಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅಭಿಮಾನಿಯೋರ್ವ ತನ್ನ ನೆಚ್ಚಿನ ನಟನನ್ನ ಅನುಕರಣೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು. ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮೀ ನಿವಾಸಿ ಅಜಂ ಅನ್ಸಾರಿಗೆ ನಟ ಸಲ್ಮಾನ್ ಖಾನ್ ಅವರ ಮೇಲೆ ಭಾರಿ ಅಭಿಮಾನ. ನೆಚ್ಚಿನ ನಟನ ಸ್ಟೈಲ್‌ನಲ್ಲಿ ಅಜಂ ಅನ್ಸಾರಿ ಶರ್ಟ್ ಧರಿಸದೇ ಠಾಕೂರ್‌ಗಂಜ್ ಪ್ರದೇಶದ ಜನನಿಬಿಡ ರಸ್ತೆಯ ಮೇಲೆ ನಡೆದುಕೊಂಡು ಬಂದಿದ್ದಾನೆ. ಇದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಸಂಚಾರ ದಟ್ಟಣೆ ಉಂಟಾಯಿತು. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಾರಕ್ಕೆ ತೊಂದರೆ ಉಂಟು ಮಾಡಿದ ಅಜಂ ಅನ್ಸಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!