Saturday, May 18, 2024
Homeಇತರಎರಡನೇ ಮದುವೆಯಿಂದ ಮನನೊಂದು, 2 ವರ್ಷದ ಕಂದಮ್ಮನ್ನನು ಕೊಂದು ತಾಯಿ ಆತ್ಮಹತ್ಯೆ

ಎರಡನೇ ಮದುವೆಯಿಂದ ಮನನೊಂದು, 2 ವರ್ಷದ ಕಂದಮ್ಮನ್ನನು ಕೊಂದು ತಾಯಿ ಆತ್ಮಹತ್ಯೆ

spot_img
- Advertisement -
- Advertisement -

ಸಕಲೇಶಪುರ : ಗಂಡನನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ಯುವತಿಯನ್ನು ಪೋಷಕರು ಎರಡನೇ ಮದುವೆ ಮಾಡಿದ್ದಕ್ಕೆ ಮನನೊಂದು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಆನೇಮಹಲ್​ನಲ್ಲಿ ನಡೆದಿದೆ.
ಮೃತರನ್ನು ಪ್ರಜ್ವಲ (26), ಸಾಧ್ವಿ (2) ಎಂದು ಗುರುತಿಸಲಾಗಿದೆ.


ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ಎನ್ನುವವರು ಕೆಲ ಸಮಯದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪ್ರಜ್ವಲ‌ ಈ‌ ಆಘಾತದಿಂದ ಹೊರಬಂದಿರಲಿಲ್ಲ. ಆದರೆ ಪ್ರಜ್ವಲ‌ ಪೋಷಕರು ಮಗಳ ಜೀವನ ಸರಿ ಹೋಗಲಿ ಎಂದು ಆನೆಮಹಲ್ ಗ್ರಾಮದ ವ್ಯಕ್ತಿಯೊಂದಿಗೆ ಜೂನ್​ 16ರಂದು ಎರಡನೇ ಮದುವೆ ಮಾಡಿದ್ದರು.

ಇನ್ನು ಈ ಎರಡನೇ ಮದುವೆಯಿಂದ ಮನೊಂದ ಪ್ರಜ್ವಲ‌ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ .

ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!