Thursday, June 4, 2026
Homeಅಪರಾಧಪುತ್ತೂರು ಕೋರ್ಟ್ ರಸ್ತೆಯಲ್ಲಿ ಸದಾಶಿವ ಪೈಗೆ ಚೂರಿ ಇರಿತ; ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮಾವನಿಂದ ಕೃತ್ಯ; ಗುಣಶೇಖರ್...

ಪುತ್ತೂರು ಕೋರ್ಟ್ ರಸ್ತೆಯಲ್ಲಿ ಸದಾಶಿವ ಪೈಗೆ ಚೂರಿ ಇರಿತ; ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮಾವನಿಂದ ಕೃತ್ಯ; ಗುಣಶೇಖರ್ ಶೆಟ್ಟಿಗೂ ಹಲ್ಲೆ

- Advertisement -
- Advertisement -

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸದ್ದು ಯಾನೆ ಸದಾಶಿವ ಪೈಗೆ ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಅನುಷ್ಕಾ ಶೆಟ್ಟಿಯ ಮಾವ ಉರಮಾಲು ಗುಣಶೇಖರ್ ಅವರಿಂದ ಚೂರಿ ಇರಿತವಾಗಿದೆ.

ಸದಾಶಿವ ಪೈಗೆ ಹಾಗೂ ಗುಣಶೇಖರ್ ಅವರಿಗೆ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೆ ಏರಿ ಗುಣಶೇಖರ್ ಶೆಟ್ಟಿಯವರು ಸದಾಶಿವ ಪೈ ಅವರಿಗೆ ಚೂರಿ ಇರಿತ ಮಾಡಿದ್ದಾರೆ. ಇನ್ನು ಸದಾಶಿವ ಪೈ ಅವರು ಗುಣಶೇಖರ್ ಅವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಸದಾಶಿವ ಪೈ ಅವರು ಪುತ್ತೂರಿನ ಮಹಾವೀರ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಬಲಗೈಗೆ ಗಾಯವಾಗಿದೆ ಎನ್ನಲಾಗಿದೆ. ಗುಣಶೇಖರ್ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!