Saturday, June 6, 2026
Homeಮನರಂಜನೆಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ತುಸು ಚೇತರಿಕೆ

ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ತುಸು ಚೇತರಿಕೆ

- Advertisement -
- Advertisement -

ಚೆನ್ನೈ: ಕೊರೊನಾ ಕಾರಣದಿಂದ ಆಸ್ಪತ್ರೆ ಸೇರಿರುವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ಇಂದು ಬೆಳಗ್ಗೆ ಕಣ್ಣು ತೆರೆದಿದ್ದಾರೆ ಅನ್ನೋ ಮಾಹಿತಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ ಅವರ ಆರೋಗ್ಯ ನಿನ್ನೆಯವರೆಗೆ ತೀರಾ ಹದಗೆಟ್ಟಿತ್ತು. ಹಾಗಾಗಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಮುಂದಿನ 24 ಗಂಟೆಗಳ ಕಾಲ ಏನನ್ನು ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದರು.

ಇಂದು ಗಾನ ಗಾರುಡಿಗನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಐಸಿಯುನಲ್ಲಿ ಎಕ್ಮೋ ಮೆಷಿನ್ ಮುಖಾಂತರ ಚಿಕಿತ್ಸೆ ನೀಡಲಾಗುತ್ತಿದೆ. ದೇಹದ ವೈಟಲ್ಸ್ ಯಾವುದೇ ಏರಿಳಿತಗಳಿಲ್ಲದೆ ಸಮತೋಲನದಲ್ಲಿ ಇರುವುದರಿಂದ ಕೃತಕ ಉಸಿರಾಟದಿಂದ ನೀಡಲ್ಪಟ್ಟ ಆಮ್ಲಜನಕ ಪ್ರಮಾಣವನ್ನು ತಗ್ಗಿಸಲಾಗಿದೆ.

- Advertisement -

Latest News

error: Content is protected !!