- Advertisement -
![]()
- Advertisement -
ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಮೊದಲು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿ ರ‍್ಯಾನ್ ರುತ್ ಎಂಬ ಬಂದೂಕುಧಾರಿಗೆ ಅಮೆರಿಕ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಫ್ಲೋರಿಡಾ ಗಾಲ್ಫ್ ಕೋರ್ಸ್ ನ ಪೊದೆಗಳ ಹಿಂದೆ ಅರೆ-ಸ್ವಯಂಚಾಲಿತ ರೈಫಲ್ ನೊಂದಿಗೆ ಅವಿತ್ತಿದ್ದ ರುತ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ಎಂದು ರಾಯ್ಟರ್ಸ್ ವರದಿ ಮಾಡಿದೆ.ಅಧ್ಯಕ್ಷ ಟ್ರಂಪ್ 2024ರ ಸೆಪ್ಟೆಂಬರ್ 15ರಂದು ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಗಾಲ್ಫ್ ಆಡುತ್ತಿದ್ದ ವೇಳೆ ಹತ್ಯೆಗೈಯಲು ಪ್ರಯತ್ನಿಸಲಾಗಿತ್ತು.
ಗಾಲ್ಫ್ ಕ್ಲಬ್ ನಿಂದ ದೂರದ ಪೊದೆಯಲ್ಲಿ ಅವಿತು ಕುಳಿತ್ತಿದ್ದ ಆರೋಪಿಯನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಪತ್ತೆ ಮಾಡಿದ್ದರು.
- Advertisement -


