Friday, July 17, 2026
Homeಕರಾವಳಿಬೆಳ್ತಂಗಡಿ ಮೂಲದ ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯ್ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

ಬೆಳ್ತಂಗಡಿ ಮೂಲದ ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯ್ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

- Advertisement -
- Advertisement -

ಬೆಂಗಳೂರು: ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯ್ ಏಪ್ರಿಲ್ ಇಪ್ಪತ್ತೊಂದರಂದು ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗಲಿದ್ದಾರೆ‌.

ಕೆಎಎಸ್ ಅಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಮಥಾಯ್, ಬಿಡಿಎ ಭೂಸ್ವಾಧೀನಾಧಿಕಾರಿಯಾಗಿ ನಿವೃತ್ತಿಯಾಗಿದ್ದರು.

ನಿವೃತ್ತಿ ಬಳಿಕ ವಕೀಲ ವೃತ್ತಿ ಮುಂದುವರಿಸಿದ್ದ ಮಥಾಯ್, ಸೇವೆಯಲ್ಲಿದ್ದಾಗ 28 ಬಾರಿ ವರ್ಗಾವಣೆಗೊಂಡಿದ್ದರು. ಬಿಬಿಎಂಪಿ ಜಾಹೀರಾತು ವಿಭಾಗ ಸೇರಿ ಭ್ರಷ್ಟಾಚಾರದ ಕೆಲವು ಮುಖಗಳನ್ನು ಬಯಲಿಗೆಳೆದಿದ್ದಕ್ಕೆ ಮಥಾಯ್ ರಾಜಕಾರಣಿಗಳ ವಿರೋಧ ಕಟ್ಟಿಕೊಳ್ಳುವಂತಾಗಿತ್ತು.

ಏಪ್ರಿಲ್ ಇಪ್ಪತ್ತೊಂದರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಮಥಾಯ್ ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಎಪಿ ಸೇರ್ಪಡೆಯಾಗಿದ್ದರು.

- Advertisement -

Latest News

error: Content is protected !!