Sunday, June 7, 2026
Homeತಾಜಾ ಸುದ್ದಿನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿ ರೋಹಿತ್ ಶೆಟ್ಟಿ ಆಯ್ಕೆ

ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿ ರೋಹಿತ್ ಶೆಟ್ಟಿ ಆಯ್ಕೆ

- Advertisement -
- Advertisement -

ಬೆಂಗಳೂರು: ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ.ಭುಜಂಗ ಶೆಟ್ಟಿ ಅವರು ನಿಧನರಾದ ಹಿನ್ನೆಲೆ ಅವರ ಅಳಿಯ ರೋಹಿತ್ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಸಂಸ್ಥೆಯ ಸಂಸ್ಥಾಪನಾಧ್ಯಕ್ಷ ಡಾ. ಭುಜಂಗ ಶೆಟ್ಟಿ ಅವರು ಮೇ 19ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯ ಉಪಾಧ್ಯಕ್ಷರಾಗಿದ್ದ ರೋಹಿತ್ ಶೆಟ್ಟಿ ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

‘ಡಾ. ಭುಜಂಗ ಶೆಟ್ಟಿ ಅವರು ಹಾಕಿಕೊಟ್ಟ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿ ಹಿಡಿಯಲಾಗುವುದು. ಆಸ್ಪತ್ರೆಯು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಸಮಾಜದ ಎಲ್ಲಾ ವರ್ಗದವರಿಗೆ ಅತ್ಯುತ್ತಮ ಗುಣಮಟ್ಟದ ಕಣ್ಣಿನ ಆರೈಕೆ ಸೇವೆ ಒದಗಿಸಲಾಗುವುದು’ ಎಂದು ಡಾ. ರೋಹಿತ್ ಶೆಟ್ಟಿ ತಿಳಿಸಿದ್ದಾರೆ.

- Advertisement -

Latest News

error: Content is protected !!