Thursday, May 2, 2024
Homeತಾಜಾ ಸುದ್ದಿರಸ್ತೆ ಕೆಲಸಕ್ಕೆ ಬಂದು 75 ಲಕ್ಷದ ಕೇರಳ ಲಾಟರಿ ಗೆದ್ದ ಯುವಕ; ದುಡ್ಡು ಬರುತ್ತಿದ್ದಂತೆ ಭಯದಿಂದ...

ರಸ್ತೆ ಕೆಲಸಕ್ಕೆ ಬಂದು 75 ಲಕ್ಷದ ಕೇರಳ ಲಾಟರಿ ಗೆದ್ದ ಯುವಕ; ದುಡ್ಡು ಬರುತ್ತಿದ್ದಂತೆ ಭಯದಿಂದ ಯುವಕ ಮಾಡಿದ್ದೇನು?

spot_img
- Advertisement -
- Advertisement -

ಕೇರಳ; ಅದೃಷ್ಟ ಯಾವ ರೂಪದಲ್ಲಿ ಯಾರಿಗೆ ಬೇಕಾದರೂ ಬರಬಹುದು ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ಸುತ್ತೆ. ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ರಸ್ತೆ ಕೆಲಸ‌ ಬಂದ ಯುವಕನೊಬ್ಬನ ಅದೃಷ್ಟವನ್ನು ಕೇರಳ ಲಾಟರಿ ಬದಲಾಯಿಸಿದೆ.ಕೇರಳದ ಸ್ತ್ರೀಶಕ್ತಿ ಲಾಟರಿಯಲ್ಲಿ ಭರ್ಜರಿ 75 ಲಕ್ಷ ರೂ.ಗೆದ್ದಿದ್ದಾನೆ.

ಯೆಸ್… ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಎಸ್ ಕೆ ಬದೇಶ್ ಅವರು ಕೇರಳದಲ್ಲಿ ಮಂಗಳವಾರ ಡ್ರಾ ಆದ ಸ್ತ್ರೀಶಕ್ತಿ ಲಾಟರಿಯಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.ಸ್ತ್ರೀ-ಶಕ್ತಿ ಲಾಟರಿ ಬಂದ ತಕ್ಷಣ ಖುಷಿಯ ಜೊತೆಗೆ ಇಷ್ಟು ಮೊತ್ತದ ಟಿಕೆಟ್ ಯಾರಾದರೂ ಕದಿಯಬಹುದೆಂದು ಎಸ್ ಕೆ ಬದೇಶ್ ಭಯದಿಂದ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದಾರೆ.

ಕರ್ತವ್ಯ ನಿರತ ಪೊಲೀಸರು ಎಸ್​ ಕೆ ಬದೇಶ್​​ನ್ನು ಸಮಾಧಾನ ಪಡಿಸಿ ಲಾಟರಿ ಚೀಟಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು ಬ್ಯಾಂಕ್‌ಗೆ ನೀಡಿ ಹಣ ಪಡೆಯುವಂತೆ ತಿಳಿಸಿದ್ದಾರೆ.ಪೊಲೀಸರು ಎಲ್ಲ ತರಹದ ಭದ್ರತೆಯನ್ನೂ ಆತನಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಎಸ್.ಕೆ.ಬದೇಶ್ ಅವರು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ವಲಸೆ ಕಾರ್ಮಿಕನಾಗಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು.ಎರ್ನಾಕುಲಂನ ಚೊಟ್ಟಾನಿಕರದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಲಾಟರಿ ಅಂಗಡಿ ನೋಡಿ, ಟಿಕೆಟ್ ಖರೀದಿಸಿದ್ದರು.ಇದೀಗ ಲಾಟರಿ ಗೆದ್ದು ಬದೇಶ್ ಜೀವನವೇ ಬದಲಾದಂತಾಗಿದೆ.

- Advertisement -
spot_img

Latest News

error: Content is protected !!