Thursday, June 4, 2026
Homeಕರಾವಳಿಬಂಟ್ವಾಳ; 10 ವರ್ಷದ ಬಳಿಕ ಜನಿಸಿದ ಮಗುವನ್ನು ನೋಡಲು ಹೋಗುವಾಗ ಅಪಘಾತ; ಆಸ್ಪತ್ರೆ ಬಳಿಯೇ ಪ್ರಾಣ...

ಬಂಟ್ವಾಳ; 10 ವರ್ಷದ ಬಳಿಕ ಜನಿಸಿದ ಮಗುವನ್ನು ನೋಡಲು ಹೋಗುವಾಗ ಅಪಘಾತ; ಆಸ್ಪತ್ರೆ ಬಳಿಯೇ ಪ್ರಾಣ ತೆತ್ತ ತಂದೆ

- Advertisement -
- Advertisement -

ಬಂಟ್ವಾಳ; ವಿವಾಹವಾಗಿ 10  ವರ್ಷದ ಬಳಿಕ ಹುಟ್ಟಿದ ಮಗುವನ್ನು ನೋಡಲು ಆಸ್ಪತ್ರೆಗೆ ಹೋಗುವಾಗ ತಂದೆ ಅಪಘಾತವಾಗಿ ಸಾವನ್ನಪ್ಪಿದ ಘಟನೆ ಮಾಣಿಯ ಬುಡೋಳಿಯಲ್ಲಿ ನಡೆದಿದೆ. ಬುಡೋಳಿ ಪಾಟ್ರಕೋಡು ನಿವಾಸಿ ಫಾರೂಕ್(35) ಮೃತ ದುರ್ದೈವಿ.

ಫಾರೂಕ್ ಅವರಿಗೆ 10  ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ.10 ವರ್ಷಗಳ ಬಳಿಕ ಮೊನ್ನೆಯಷ್ಟೇ ಅವರ ಪತ್ನಿಗೆ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು ನೋಡಲು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುವಾಗ ದೇರಳಕಟ್ಟೆ ಆಸ್ಪತ್ರೆಯ ಬಳಿಯೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮೃತಪಟ್ಟಿದ್ದಾರೆ.ಫಾರೂಕ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!