Sunday, June 7, 2026
Homeಕರಾವಳಿಮಂಗಳೂರು: ಕಡಲಿನ ಅಬ್ಬರಕ್ಕೆ ರಸ್ತೆ ಸಮುದ್ರಪಾಲು

ಮಂಗಳೂರು: ಕಡಲಿನ ಅಬ್ಬರಕ್ಕೆ ರಸ್ತೆ ಸಮುದ್ರಪಾಲು

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಿದ್ದರೂ ಸಮುದ್ರದ ಅಬ್ಬರ ಕಡಿಮೆಯಾಗಿಲ್ಲ.‌ಕಡಲಿನ ಅಬ್ಬರಕ್ಕೆ ಸಂಪೂರ್ಣ ರಸ್ತೆಯೇ ಸಮುದ್ರದ ಪಾಲಾಗಿದೆ.

ಮಂಗಳೂರು ಹೊರವಲಯದ ಉಚ್ಚಿಲದ ಬಟಪಾಡಿ ಎಂಬಲ್ಲಿ ಘಟನೆ ನಡೆದಿದ್ದು, ಸಮುದ್ರ ತೀರದ ಡಾಮರು ರಸ್ತೆಯ ಸಮುದ್ರಕ್ಕೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸದ್ಯ ಬಟಪಾಡಿ ಮತ್ತು ಉಚ್ಚಿಲದ ಮಧ್ಯೆ ರಸ್ತೆ ಸಂಪರ್ಕ ಸ್ಥಗಿತವಾಗಿದ್ದು ಎಂಡ್ ಪಾಯಿಂಟ್ ತೆರಳುವ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.

ಅಲ್ಲದೇ ಹತ್ತಕ್ಕೂ ಹೆಚ್ಚು ಮನೆಗಳು ಮತ್ತು ಪ್ರವಾಸಿ ರೆಸಾರ್ಟ್ ಗಳಿಗೆ ಕೂಡಾ ರಸ್ತೆ ಸಂಪರ್ಕ ನಿಲುಗಡೆಯಾಗಿದೆ. ಸುಮಾರು 200 ಮೀಟರ್ ನಷ್ಟು ರಸ್ತೆಯನ್ನು ಸಮುದ್ರ ಸಂಪೂರ್ಣ ನುಂಗಿ ಹಾಕಿದೆ.‌

- Advertisement -

Latest News

error: Content is protected !!