Thursday, June 4, 2026
Homeಕರಾವಳಿಧರ್ಮಸ್ಥಳ : ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ನಟ ರಿಷಬ್ ಶೆಟ್ಟಿ; ಹತ್ತು ದಿನಗಳ ಕಾಲ...

ಧರ್ಮಸ್ಥಳ : ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ನಟ ರಿಷಬ್ ಶೆಟ್ಟಿ; ಹತ್ತು ದಿನಗಳ ಕಾಲ ಗೌಪ್ಯವಾಗಿ ನಡೆದ ಚಿಕಿತ್ಸೆಯ ಗುಟ್ಟೇನು?

- Advertisement -
- Advertisement -

ಬೆಳ್ತಂಗಡಿ : ಕಾಂತಾರ ಚಲನಚಿತ್ರ ಭಾರಿ ಸದ್ದು ಮಾಡುತ್ತಿರುವ ನಡುವೆಯೂ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಹತ್ತು ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಶಾಂತಿವನದಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಹೋಗಿದ್ದಾರೆ.

ಇನ್ನೂ ನಟ ರಿಷಬ್ ಶೆಟ್ಟಿಯವರು ಯಾವ ಕಾರಣಕ್ಕಾಗಿ ಹತ್ತು ದಿನಗಳ ಕಾಲ ಮಾಹಿತಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಯಾಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಜ.25 ಕ್ಕೆ ರಿಷಬ್ ಶೆಟ್ಟಿಯವರ ಚಿಕಿತ್ಸೆ ಶಾಂತಿವನದಲ್ಲಿ ಪೂರ್ಣಗೊಂಡಿತ್ತು. ಜ.26 ರ ಗಣರಾಜ್ಯೋತ್ಸವದ ದಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಪ್ರಕೃತಿ ಚಿಕಿತ್ಸಾಲಯದಲ್ಲಿ ಅಡಳಿತ ಮಂಡಳಿ ಜೊತೆ ಧ್ವಜಾರೋಹಣ ಮಾಡುವ ಮೂಲಕ ಭಾಗಿಯಾದ ನಂತರ ತಮ್ಮ ಊರಿಗೆ ವಾಪಸ್ ತೆರಳಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಆಡಳಿತ ಮಂಡಳಿ ಜೊತೆ ಭಾಗಿಯಾಗಿದ್ದಾರೆ.

- Advertisement -

Latest News

error: Content is protected !!