Wednesday, April 16, 2025
Homeಕರಾವಳಿಉಡುಪಿನ್ಯಾಯಾಲಯದ ಆವರಣದಲ್ಲಿ ಗುಂಪಿನಿಂದ ಗಲಾಟೆ: ಪ್ರಕರಣ ದಾಖಲು

ನ್ಯಾಯಾಲಯದ ಆವರಣದಲ್ಲಿ ಗುಂಪಿನಿಂದ ಗಲಾಟೆ: ಪ್ರಕರಣ ದಾಖಲು

spot_img
- Advertisement -
- Advertisement -

ಉಡುಪಿ: ನ್ಯಾಯಾಲಯದ ಆವರಣದಲ್ಲಿ ಮಾ. 27ರಂದು ಸಂಜೆ ಕೋರ್ಟ್‌ ಆವರಣದಲ್ಲಿ ಸುಮಾರು 10ರಿಂದ 20 ಮಂದಿ ಗುಂಪು ಸೇರಿಕೊಂಡಿ ಗಲಾಟೆ ಮಾಡಿದ್ದು, ಇದೀಗ ಗುಂಪಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಮಾ. 27ರಂದು ಸಂಜೆ ಕೋರ್ಟ್‌ ಆವರಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶಿರಸ್ತೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಯಾ ಆರ್‌. ಅವರು ನೋಡಿದಾಗ ಸುಮಾರು 10ರಿಂದ 20 ಮಂದಿ ಗುಂಪು ಸೇರಿಕೊಂಡಿದ್ದರು. ಅವರು ಅಲ್ಲಿ ಸೇರಿಕೊಂಡಿದ್ದಂತಹ ಕಾರಣವನ್ನು ಕೇಳಿದಾಗ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಪ್ರಕರಣದ ಡೆಲಿವರಿ ವಾರಂಟ್‌ ಕಾರ್ಯಗತಗೊಳಿಸುವ ಸಂಬಂಧ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಯಾ ಅವರು ಅವರಿಗೆ ನ್ಯಾಯಾಧೀಶರ ಅನುಮತಿ ಪಡೆಯದೇ ಯಾರೂ ಭೇಟಿ ಆಗಲು ಸಾಧ್ಯವಿಲ್ಲ ಎಂದು ಮಾಯಾ ತಿಳಿಸಿದ್ದಾರೆ. ಈ ವಿಷಯ ಕೇಳೀ ಇದಕ್ಕೆ ಅವರೆಲ್ಲ ಸೇರಿ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟು ಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯವಾಗಿ ಅಡ್ಡಿಪಡಿಸಿ ಭಯದ ವಾತವಾರಣ ಸೃಷ್ಟಿಸಿದ್ದಾರೆ ಎಂದು ಮಾಯಾ ಅವರು ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!