Saturday, June 6, 2026
Homeಕರಾವಳಿಬೆಳ್ತಂಗಡಿ; ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ

ಬೆಳ್ತಂಗಡಿ; ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ದಾಳಿ

- Advertisement -
- Advertisement -

ಬೆಳ್ತಂಗಡಿ; ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಪೊಲೀಸರು ದಾಳಿ ಮಾಡಿರುವ ಘಟನೆ ಬೆಳ್ತಂಗಡಿ  ತಾಲೂಕು ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ನಡೆದಿದೆ.

ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ಬೆಳ್ತಂಗಡಿ ನಿವಾಸಿ ಸತೀಶ್ (40) ಎಂಬಾತ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ, ದಾಳಿ ನಡೆಸಿದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಶೈಲ D ಮುರಗೋಡ ಹಾಗೂ ಸಿಬ್ಬಂದಿ ತಂಡ, ಆತನಲ್ಲಿದ್ದ, 90 ಎಂ.ಎಲ್. ಮದ್ಯ ತುಂಬಿದ 32 ಸ್ಯಾಚೆಟ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಇನ್ನು ಸ್ವಾಧೀನಪಡಿಸಿದ ಮದ್ಯದ ಒಟ್ಟು ಪ್ರಮಾಣ 2. 880 ಲೀಟರ್ ಆಗಿದ್ದು, ಅಂದಾಜು ಮೌಲ್ಯ ರೂ 1,312-00 ಆಗಿದೆ.

 ಈ ಬಗ್ಗೆ ವೇಣೂರು ಪೊಲೀಸ್  ಠಾಣೆಯಲ್ಲಿ 26/2024 ಕಲಂ: 32, 34 ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!