Thursday, June 4, 2026
Homeಕರಾವಳಿಬಂಟ್ವಾಳ :ಏಕಾಏಕಿ ಕುಸಿದು ಬಿದ್ದು 2ನೇ ತರಗತಿ ಬಾಲಕಿ ಸಾವು

ಬಂಟ್ವಾಳ :ಏಕಾಏಕಿ ಕುಸಿದು ಬಿದ್ದು 2ನೇ ತರಗತಿ ಬಾಲಕಿ ಸಾವು

- Advertisement -
- Advertisement -

ಬಂಟ್ವಾಳ :ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ  2ನೇ ತರಗತಿ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬಿ ಸಿ ರೋಡು ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.

ತಲಪಾಡಿ ನಿವಾಸಿ ಸಫೀರ್ ಅಹ್ಮದ್ ಅವರ ಪುತ್ರಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ 2ನೇ ತರಗತಿ ವಿದ್ಯಾರ್ಥಿನಿ ಆಯಿಷಾ ಶೈಮಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಯಿಷಾ ಶೈಮಾಳನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೆರಡು ದಿನಗಳ ಕಾಲ ಕೋಮಾವಸ್ಥೆಯಲ್ಲೇ ಇದ್ದ ಈಕೆ ಬಳಿಕ ಒಂದಷ್ಟು ಚಿಕಿತ್ಸೆಗೆ ಸ್ಪಂದಿಸಿ ಚೇತರಿಕೆ ಹಂತದಲ್ಲಿದ್ದಳು ಎನ್ನಲಾಗಿದೆ. ಆದರೆ ಬುಧವಾರ ಮತ್ತೆ ಆರೋಗ್ಯದಲ್ಲಿ ಗಂ ಏರುಪೇರು ಉಂಟಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

- Advertisement -

Latest News

error: Content is protected !!