Sunday, April 28, 2024
Homeಕರಾವಳಿಉಡುಪಿಕರಾವಳಿ ಜನ ಹಿಂದುತ್ವದ ಮಾತಿಗೆ ಮರುಳಾಗದೆ ಅಭಿವೃದ್ಧಿಗಾಗಿ ಮತ ಚಲಾಯಿಸುತ್ತಾರೆ: ಮಧು ಬಂಗಾರಪ್ಪ

ಕರಾವಳಿ ಜನ ಹಿಂದುತ್ವದ ಮಾತಿಗೆ ಮರುಳಾಗದೆ ಅಭಿವೃದ್ಧಿಗಾಗಿ ಮತ ಚಲಾಯಿಸುತ್ತಾರೆ: ಮಧು ಬಂಗಾರಪ್ಪ

spot_img
- Advertisement -
- Advertisement -

ಕುಂದಾಪುರ: ಕಾಂಗ್ರೆಸ್ ಸರಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಮಾತನ್ನು ಪೂರೈಸಿದೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಂದಾಗಿ ರಾಜ್ಯದ ಜನ ಅದರಲ್ಲೂ ಕರಾವಳಿ ಜನ ಹಿಂದುತ್ವದ ಮಾತಿನ ಮರುಳಾಗದೆ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಬೈಂದೂರಿನ ಜನರು ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾರೆ. ಗೃಹಲಕ್ಷ್ಮಿ ಗೃಹಜ್ಯೋತಿಯಂತಹ ಯೋಜನೆಗಳು ಬಡವರ ಮನೆಗೆ ಬೆಳಕಾಗಿವೆ ಎಂದರು.

ಇನ್ನು ಬೈಂದೂರು ಕ್ಷೇತ್ರದಲ್ಲಿ ಬಂಗಾರಪ್ಪ ಜತೆಗಿದ್ದ ಬಿ.ಎಂ. ಸುಕುಮಾರ ಶೆಟ್ಟರು ಮರಳಿ ಕಾಂಗ್ರೆಸ್‌ ಸೇರಿದ್ದಾರೆ. ಸೋತ ಬಳಿಕ ಗೀತಾ ಶಿವರಾಜ್‌ ಕುಮಾರ್‌ ಬೈಂದೂರಿಗೆ ಕಡಿಮೆ ಭೇಟಿ ನೀಡಿರಬಹುದು ಆದರೆ ಶಿವಮೊಗ್ಗಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ನಾನು ಮಧ್ಯವರ್ತಿಯಾಗಿ ಇರುವುದಿಲ್ಲ, ಅವರೇ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಎಂದರು.

ಸ್ವತಂತ್ಯ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಈಶ್ವರಪ್ಪ ಗೊಂದಲ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಬಿಜೆಪಿಯಲ್ಲಿ ಗೊಂದಲವಿದೆ. ಆದರೆ ಬೇರೆ ಮನೆ ಒಡೆದು ನಾವು ರಾಜಕಾರಣ ಮಾಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ. ಎಂ . ಸುಕುಮಾರ ಶೆಟ್ಟಿ , ಕೆಪಿಸಿಸಿ ಕಾರ್ಯದರ್ಶಿ ಜಿ. ಎ . ಬಾವ , ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಜು ಪೂಜಾರಿ ಬೈಂದೂರು, ಡಿ.ಆರ್‌ . ರಾಜು ಕಾರ್ಕಳ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಶೆಟ್ಟಿ ಗುಡಿಬೆಟ್ಟು, ಬೈಂದೂರು ಅಧ್ಯಕ್ಷ ಅರವಿಂದ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ್‌ ಪೂಜಾರಿ ಬೀಜಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!