Sunday, June 7, 2026
Homeಕರಾವಳಿಮಂಗಳೂರುಸುಳ್ಯ; ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿ  ನಿವೃತ್ತ ರೇಂಜರ್ ಸಾವು

ಸುಳ್ಯ; ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿ  ನಿವೃತ್ತ ರೇಂಜರ್ ಸಾವು

- Advertisement -
- Advertisement -

ಸುಳ್ಯ; ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿ  ನಿವೃತ್ತ ರೇಂಜರ್ ಸಾವನ್ನಪ್ಪಿರುವ ಘಟನೆ ಕರಿಕ್ಕಳದ ಮುಚ್ಚಿಲದಲ್ಲಿ ನಡೆದಿದೆ. ನಿವೃತ್ತ ರೇಂಜರ್ ಜೋಸೆಫ್ (74) ಮೃತ ದುರ್ದೈವಿ.

ಮನೆಯಂಗಳದಲ್ಲಿದ್ದ ಜೋಸೆಫ್ ಅವರು ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ಗುದ್ದಿದೆ. ಪರಿಣಾಮ ಅವರು ಕುಸಿದು ಬಿದ್ದಿದ್ದಾರೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಂಪಾಜೆಯಲ್ಲಿ ರೇಂಜರ್ ಆಗಿ ನಿವೃತ್ತರಾಗಿದ್ದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

- Advertisement -

Latest News

error: Content is protected !!