Thursday, June 25, 2026
Homeಕರಾವಳಿಮಂಗಳೂರು: ಸಹಾಯಕ ನಿರ್ದೇಶಕರಿಗೆ ಹಿಂಭಡ್ತಿ

ಮಂಗಳೂರು: ಸಹಾಯಕ ನಿರ್ದೇಶಕರಿಗೆ ಹಿಂಭಡ್ತಿ

- Advertisement -
- Advertisement -

ಮಂಗಳೂರು: ಫೆ 21 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರಶ್ನಿಸಿ ಶ್ರೀ ಗೋಪಾಲಕೃಷ್ಣ, ಮತ್ತು ಇತರರು ಮಾತ್ರ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಸದರಿ ಅರ್ಜಿಗಳು ಇತ್ಯರ್ಥ ಬಾಕಿ ಇದ್ದವು, ಸರ್ಕಾರವು ಬಾಕಿ ಇದ್ದ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟು ಪಂಚಾಯತ್ ಅಭಿವೃದ್ಧಿ, ಅಧಿಕಾರಿಗಳ ಜೇಷ್ಠತಾ ಪಟ್ಟಿಯನುಸಾರ ಅರ್ಹ ಪಂಚಾಯತ್ ಅಭಿವೃದ್ಧಿ, ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಕುರಿತು ಇದೇ ಜ.24.ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆದಿತ್ತು.


ಸಭೆಯಲ್ಲಿ ಇತ್ತೀಚಿಗಷ್ಟೇ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಿದ ಎಂ. ದಿನೇಶ್, ಸಹಾಯಕ ನಿರ್ದೇಶಕ, ತಾಲೂಕು ಪಂಚಾಯತ್, ಬಂಟ್ವಾಳ ಇವರನ್ನು ಕರ್ನಾಟಕ ಸರಕಾರ ನಿಯಮ -32 ರಡಿ  ಸಹಾಯಕ ನಿರ್ದೇಶಕ  ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು, ಅವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲಿ ಮುಂದುವರಿಸಿ, ಸದರಿಯವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲಿ ಮುಂದುವರಿಸಲು ಸರಕಾರ ಆದೇಶಿಸಿದೆ.

- Advertisement -

Latest News

error: Content is protected !!