Thursday, April 25, 2024
Homeತಾಜಾ ಸುದ್ದಿಮಂಗಳೂರು: ಪಾನಮತ್ತ ಮಹಿಳೆಯಿಂದ ಎಂಟು ತಿಂಗಳ ಹೆಣ್ಣುಮಗುವಿನ ರಕ್ಷಣೆ

ಮಂಗಳೂರು: ಪಾನಮತ್ತ ಮಹಿಳೆಯಿಂದ ಎಂಟು ತಿಂಗಳ ಹೆಣ್ಣುಮಗುವಿನ ರಕ್ಷಣೆ

spot_img
- Advertisement -
- Advertisement -

ಮಂಗಳೂರು: ನಗರದ ಸರ್ಕಾರಿ ಆಸ್ಪತ್ರೆಯೊಂದರ ಬಳಿ ಎಂಟು ತಿಂಗಳ ಮಗುವನ್ನು ಹಿಡಿದುಕೊಂಡು ಪಾನಮತ್ತಳಾಗಿ ತಿರುಗುತ್ತಿದ್ದ ಮಹಿಳೆಯ ಬಳಿಯಿದ್ದ ಮಗುವನ್ನು ದ.ಕನ್ನಡ ಜಿಲ್ಲಾ ಚೈಲ್ಡ್ ಲೈನ್ ತಂಡವು ಪಾಂಡೇಶ್ವರ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಕ್ಷಿಸಿದೆ.

ಮಹಿಳೆಯೋರ್ವಳು ಪಾನಮತ್ತಳಾಗಿದ್ದಾಳೆ ಈಕೆಯ ಬಳಿ ಹೆಣ್ಣುಮಗುವೊಂದಿದ್ದು ಮಗುವಿಗೆ ರಕ್ಷಣೆ ನೀಡುವಂತೆ ಸಾರ್ವಜನಿಕರು ಚೈಲ್ಡ್ ಲೈನ್ -1098ಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೈಲ್ಡ್ ಲೈನ್ ತಂಡವು ಜುಲೈ 15ರಂದು ಮಹಿಳೆಯ ಬಳಿಯಿದ್ದ 8 ತಿಂಗಳ ಮಗುವಿಗೆ ಸೂಕ್ತ ರಕ್ಷಣೆಯ ಅಗತ್ಯವಿದ್ದುದರಿಂದ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕಿಯರ ವಸತಿ ನಿಲಯದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ.

ಚೈಲ್ಡ್ ಲೈನ್ 1098 ದ.ಕನ್ನಡ ಜಿಲ್ಲೆಯ ಕೇಂದ್ರ ಸಂಯೋಜಕ ದೀಕ್ಷಿತ್ ಅಚಪ್ಪಾಡಿ, ಸದಸ್ಯ ಆಶಾಲತ ಕುಂಪಲ, ಸಿಬ್ಬಂದಿ ಸುಪ್ರಿತ್ ಆರ್ಲಪದವು, ಕವನ್ ಕಬಕ, ಕು.ಶೋಭಾ ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!