Sunday, May 5, 2024
Homeತಾಜಾ ಸುದ್ದಿತಡರಾತ್ರಿಯ ಆದೇಶದಲ್ಲಿ ತಡವರಿಸಿದ ಸರ್ಕಾರ: ಆದೇಶದಲ್ಲಿ ಕನ್ನಡದ ಕಗ್ಗೊಲೆ

ತಡರಾತ್ರಿಯ ಆದೇಶದಲ್ಲಿ ತಡವರಿಸಿದ ಸರ್ಕಾರ: ಆದೇಶದಲ್ಲಿ ಕನ್ನಡದ ಕಗ್ಗೊಲೆ

spot_img
- Advertisement -
- Advertisement -

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ ವಿಡಿಯೋ ಮಾಡಬಾರದೆಂದು  ರಾಜ್ಯ‌ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರಕಾರ ಮಧ್ಯರಾತ್ರಿ ಹಿಂಪಡೆದಿದೆ.
ಆದರೆ ಆದೇಶ ಹಿಂಪಡೆದ ಪ್ರತಿಯಲ್ಲಿ ಅಕ್ಷರ ದೋಷಗಳೇ ತುಂಬಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಒಳಗಾಗಿದೆ.

ನಡಾವಳಿ ಎಂಬ ಶಬ್ದವನ್ನು ನಡವಳಿ, ಪ್ರಸ್ತಾವನೆಯನ್ನು ಪ್ರಸತ್ತಾವನೆ, ಮೇಲೆ- ಮೇಲೇ, ಭಾಗ- ಬಾಗ, ಕರ್ನಾಟಕ- ಕರ್ನಾಟಾ, ಆಡಳಿತ- ಆಡಳಿದ ಎಂದು ಬರೆಯಲಾಗಿದೆ.

ರಾಜ್ಯ ಸರಕಾರದ ಈ ಆದೇಶದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇನಾ ಆಡಳಿತದಲ್ಲಿ ಕನ್ನಡ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ ಮಧ್ಯರಾತ್ರಿ ಆದೇಶ ಹಿಂಪಡೆಯುಬವ ಭರದಲ್ಲಿ ಸರ್ಕಾರ ಅಕ್ಷರಗಳನ್ನೇ ಮರೆದಂತಿದೆ ಎಂಬ ಟೀಕೆಗಳು ಕೇಳಿ  ಬರುತ್ತಿದೆ.

- Advertisement -
spot_img

Latest News

error: Content is protected !!