Wednesday, June 3, 2026
Homeಅಪರಾಧಮದ್ಯದ ನಶೆಯಲ್ಲಿದ್ದ ವ್ಯಕ್ತಿಯಿಂದ ಅಸಹಾಯಕ ಮಗುವಿನ ರಕ್ಷಣೆ

ಮದ್ಯದ ನಶೆಯಲ್ಲಿದ್ದ ವ್ಯಕ್ತಿಯಿಂದ ಅಸಹಾಯಕ ಮಗುವಿನ ರಕ್ಷಣೆ

- Advertisement -
- Advertisement -

ಉಡುಪಿ: ಮದ್ಯದ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಗಂಡು ಮಗುವನ್ನು ಮಂಗಳವಾರದಂದು ಇಂದ್ರಾಳಿ ರೈಲ್ವೇ ಸೇತುವೆ ಬಳಿಯಲ್ಲಿ ರಕ್ಷಿಸಲಾಗಿದೆ.

ಈ ಕುರಿತಂತೆ ಸ್ಥಳೀಯರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸರ ಮೂಲಕ ಮಗುವನ್ನು ರಕ್ಷಿಸಿದ್ದು, ಲಕ್ಷ್ಮೀನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದ ಆಶ್ರಯದಲ್ಲಿ ಮಗುವನ್ನು ಸುರಕ್ಷಿತವಾಗಿರಿಸಿದ್ದಾರೆ. ರಕ್ಷಿಸಲ್ಪಟ್ಟ ಮಗುವಿಗೆ ಸುಮಾರು ಎರಡೂವರೆ ವರ್ಷ ಎಂದು ಅಂದಾಜಿಸಲಾಗಿದ್ದು, ಮದ್ಯಪಾನ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಬೆಂಗಳೂರಿನ ರಾಮನಗರದ ನಿವಾಸಿ ಎಂದು ಗುರುತು ಹೇಳಿದ್ದಾನೆ. ಹಾಗೆಯೇ ಆತ ಮಗುವಿನ ತಾನು ತಂದೆ ತಾನೆಂದು ತಿಳಿಸಿ‌ದ್ದಾನೆ. ಇನ್ನು ಈ ಕುರಿತಂತೆ ದಾಖಲೆಗಳು ಇಲ್ಲದಿರುವುದು ಮತ್ತು ನೀಡಿರುವ ವಿವರಗಳು ಅಸ್ಪಷ್ಟವಾಗಿದ್ದರಿಂದ ಮಗುವಿನ ಹೆತ್ತವರು ಯಾರೆಂದು ತನಿಖೆಯಿಂದ ತಿಳಿದುಬರಬೇಕಾಗಿದೆ.

ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಘಟಕದ ಪ್ರಕಾಶ್‌ ನಾಯ್ಕ್, ಮನೋಜ್‌ ಉಪಸ್ಥಿತರಿದ್ದರು.

- Advertisement -

Latest News

error: Content is protected !!