Tuesday, July 1, 2025
Homeತಾಜಾ ಸುದ್ದಿಕರಾವಳಿಯ ಬೆಳ್ತಂಗಡಿ ಮೂಲದ ಕನ್ನಡದ ಹೆಸರಾಂತ ನಟಿ ಲೀಲಾವತಿ ನಿಧನ

ಕರಾವಳಿಯ ಬೆಳ್ತಂಗಡಿ ಮೂಲದ ಕನ್ನಡದ ಹೆಸರಾಂತ ನಟಿ ಲೀಲಾವತಿ ನಿಧನ

spot_img
- Advertisement -
- Advertisement -

ಬೆಂಗಳೂರು: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಕರಾವಳಿ ಮೂಲದ ಬೆಳ್ತಂಗಡಿಯ ಕನ್ನಡದ ಹಿರಿಯ ನಟಿ, ಲೀಲಾವತಿ ಕೊನೆಯುಸಿರೆಳೆದಿದ್ದಾರೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಡಿಸೆಂಬರ್ 08 ಇಂದು ಏರುಪೇರು ಉಂಟಾಗಿತ್ತು, ತಕ್ಷಣ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಲೀಲಾವತಿ ಅವರು ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್​ ಹಿಟ್​ ಸಿನಿಮಾ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ.

- Advertisement -
spot_img

Latest News

error: Content is protected !!