Tuesday, August 4, 2026
Homeತಾಜಾ ಸುದ್ದಿಭಾರತದ ಖ್ಯಾತ ಶಿಕ್ಷಣ ತಜ್ಞ ಡಾ. ಡಿ. ವೈ. ಪಾಟೀಲ್ ನಿಧನ

ಭಾರತದ ಖ್ಯಾತ ಶಿಕ್ಷಣ ತಜ್ಞ ಡಾ. ಡಿ. ವೈ. ಪಾಟೀಲ್ ನಿಧನ

- Advertisement -
- Advertisement -

ಭಾರತದ ಖ್ಯಾತ ಶಿಕ್ಷಣ ತಜ್ಞ, ಬಿಹಾರ, ತ್ರಿಪುರಾ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಜ್ಞಾನದೇವ್ ಯಶವಂತರಾವ್ (ಡಿ. ವೈ.) ಪಾಟೀಲ್ (90) ಅವರು ಮಂಗಳವಾರ ಕೊಲ್ಲಾಪುರದ ತಮ್ಮ ನಿವಾಸದಲ್ಲಿ ನಿಧನರಾದರು.

ಅಕ್ಟೋಬರ್ 22, 1935 ರಂದು ಕೊಲ್ಲಾಪುರದ ಕೃಷಿ ಕುಟುಂಬದಲ್ಲಿ ಜನಿಸಿದ ಇವರು ರಾಜಾರಾಮ್ ಕಾಲೇಜಿನಲ್ಲಿ ಪದವಿ ಮತ್ತು ಶಿವಾಜಿ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ದರ್ಜೆಯಲ್ಲಿ ಕಾನೂನು ಪದವಿ ಪೂರೈಸಿದ್ದರು.

ಸುಮಾರು ಐದು ದಶಕಗಳ ಕಾಲ ಮಹಾರಾಷ್ಟ್ರದ ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಡಾ. ಪಾಟೀಲ್, ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಸೇರಿದಂತೆ ಹಲವು ವೃತ್ತಿಪರ ಸಂಸ್ಥೆಗಳನ್ನು ಸ್ಥಾಪಿಸಿದರು. ಇವರಿಂದ ರೂಪುಗೊಂಡ ‘ಡಿ.ವೈ. ಪಾಟೀಲ್ ಗ್ರೂಪ್’ ಇಂದು ನವಿ ಮುಂಬೈ, ಪುಣೆ, ಕೊಲ್ಲಾಪುರಗಳಲ್ಲಿ 100ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮುನ್ನಡೆಸುತ್ತಿದೆ. ಶಿಕ್ಷಣ ರಂಗದ ಈ ಅಪಾರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ‘ಪದ್ಮಶ್ರೀ’ ನೀಡಿದ್ದು, ಇವರ ನಿಧನಕ್ಕೆ ದೇಶದ ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!