ಮುಂಬೈ : ಉದ್ಯಮ ಕ್ಷೇತ್ರದ ದೈತ್ಯ ,ತೈಲದಿಂದ ಟೆಲಿಕಾಂ ತನಕ ವ್ಯವಹಾರ ನಡೆಸುವ ರಿಲಯನ್ಸ್ ಇಂಡಸ್ಟ್ರೀಸ್ ರೂ.53 ಸಾವಿರ ಕೋಟಿ ಬಂಡವಾಳ ಕ್ರೋಡೀಕರಿಸಲು ಮುಂದಾಗಿದೆ. ಅದರ ಈಗಿನ ಷೇರುದಾರರಿಂದ ರೈಟ್ಸ್ ಇಷ್ಯೂ (ಹಕ್ಕಿನ ಷೇರು) ಮೂಲಕ ಹಣ ಸಂಗ್ರಹಿಸಲಿದೆ ಎಂದು ಗುರುವಾರ ಕಂಪೆನಿ ತಿಳಿಸಿದೆ. 10 ರುಪಾಯಿಯ ಷೇರನ್ನು ರೈಟ್ಸ್ ಇಷ್ಯೂ ಮೂಲಕ ಅರ್ಹ ಷೇರುದಾರರಿಗೆ ವಿತರಿಸಲಿದೆ. 53,125 ಕೋಟಿ ರುಪಾಯಿ ಕೋಟಿ ಸಂಗ್ರಹ ಮಾಡಲಿದೆ.
ಜಾಗತಿಕ ಅತಿಶ್ರೀಮಂತರ ಪೈಕಿ ಮುಂಚೂಣಿಯಲ್ಲಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ನ ನಿವ್ವಳ ಲಾಭದಲ್ಲಿ ಶೇ.39 ಕುಸಿತವಾಗಿದೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2019-2020ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟಾರೆ ಲಾಭದಲ್ಲಿ 6,348 ಕೋಟಿ ರೂ. ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ರಿಲಯನ್ಸ್ ಕಂಪನಿಯ ನಿವ್ವಳ ಲಾಭ ಕುಸಿಯಲು ಕಾರಣ ಎನ್ನಲಾಗಿದೆ.
ಸದ್ಯಕ್ಕೆ ಮಾರಾಟ ಆಗುತ್ತಿರುವ ಮಾರುಕಟ್ಟೆ ಬೆಲೆಗಿಂತ 210 ರುಪಾಯಿ ಕಡಿಮೆ ಬೆಲೆಗೆ, ಅಂದರೆ 14 ಪರ್ಸೆಂಟ್ ರಿಯಾಯಿತಿ ದರದಲ್ಲಿ 1257 ರುಪಾಯಿಗೆ ವಿತರಿಸಲಿದೆ. ರೆಕಾರ್ಡ್ ದಿನಾಂಕದ ಹೊತ್ತಿಗೆ ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ 15 ಷೇರಿಗೆ 1 ಷೇರಿಗೆ ಅರ್ಜಿ ಹಾಕಬಹುದು.
ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ ಫೇಸ್ ಬುಕ್ 43,600 ಕೋಟಿ ರುಪಾಯಿ ಹೂಡಿಕೆ ಘೋಷಣೆ ಬೆನ್ನಿಗೆ ಮಾರ್ಚ್ 2021ರ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರಿಯ ಸಾಲವನ್ನು ಸಂಪೂರ್ಣ ತೀರಿಸಲು ಮುಂದಾಗಿದೆ. ರೈಟ್ಸ್ ಇಷ್ಯೂ ಅಂದರೆ ಹಕ್ಕಿನ ಷೇರು ವಿತರಣೆ ಎಂಬರ್ಥ.
ರೆಕಾರ್ಡ್ ದಿನಾಂಕ ಎಂದು ದಿನ ನಿಗದಿಪಡಿಸಲಾಗುತ್ತದೆ. ಆ ದಿನಕ್ಕೆ ಯಾರ ಬಳಿ ಷೇರು ಇರುತ್ತದೋ ಅಂಥವರು ಅರ್ಜಿ ಹಾಕಬಹುದು. ತಮ್ಮ ಬಳಿ ಇರುವ ರಿಲಯನ್ಸ್ ನ ಪ್ರತಿ 15 ಷೇರಿಗೆ 1ರಂತೆ ಅವರಿಗೆ ದೊರೆಯುತ್ತದೆ. ಅದಕ್ಕೆ ಪ್ರತಿ ಷೇರಿಗೆ 1257 ರುಪಾಯಿ ಪಾವತಿ ಮಾಡಬೇಕಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಈಗಿನ ಮಾರುಕಟ್ಟೆ ಬೆಲೆ (ಏಪ್ರಿಲ್ 30, 2020) ಬಿಎಸ್ ಇಯಲ್ಲಿ ರೂ. 1467.05 ಇದೆ.
14% ರಿಯಾಯಿತಿ ದರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ ಷೇರು ವಿತರಣೆ
- Advertisement -
- Advertisement -
- Advertisement -